ಹುಬ್ಬಳ್ಳಿ ಗಲಭೆ: ಪ್ರಚೋದನಕಾರಿ ಭಾಷಣ ಮಾಡಿದ್ದ ವಸೀಂಗಾಗಿ ಹೈದರಾಬಾದ್‌ಗೆ ತೆರಳಿದ ಪೊಲೀಸರು
ಹುಬ್ಬಳ್ಳಿ ಕೋಮುಗಲಭೆಗೆ ದಿನಕ್ಕೊಂದು ತಿರುವು ಸಿಗುತ್ತಿದೆ. ಗಲಭೆ ಮಾಸ್ಟರ್ ಮೈಂಡ್‌ಗಳ ಹಿಂದೆ AIMIM ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಮೌಲ್ವಿ ವಸೀಂ, ಆರೀಫ್‌ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈತ ಹೈದರಾಬಾದ್‌ಗೆ ಪರಾರಿಯಾಗಿದ್ದು, ಈತನ ಹುಡುಕಾಟಕ್ಕೆ ಅಲ್ಲಿಗೆ ಪೊಲೀಸರ ತಂಡವೊಂದು ತೆರಳಿದೆ.
ಧಾರವಾಡ (ಏ. 21): ಹುಬ್ಬಳ್ಳಿ ಕೋಮುಗಲಭೆಗೆ (Hubballi Riot) ದಿನಕ್ಕೊಂದು ತಿರುವು ಸಿಗುತ್ತಿದೆ. ಗಲಭೆ ಮಾಸ್ಟರ್ ಮೈಂಡ್‌ಗಳ ಹಿಂದೆ AIMIM ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಮೌಲ್ವಿ ವಸೀಂ, ಆರೀಫ್‌ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈತ ಹೈದರಾಬಾದ್‌ಗೆ ಪರಾರಿಯಾಗಿದ್ದು, ಈತನ ಹುಡುಕಾಟಕ್ಕೆ ಅಲ್ಲಿಗೆ ಪೊಲೀಸರ ತಂಡವೊಂದು ತೆರಳಿದೆ.
ಶನಿವಾರ ರಾತ್ರಿ ನಡೆದ ಗಲಭೆ ವೇಳೆ ವಸೀಂ ಪಠಾಣ ಎಂಬಾತ ಪೊಲೀಸ್ ವಾಹನದ ಮೇಲೆ ನಿಂತು ಪ್ರಚೋದನಾಕಾರಿ ಭಾಷಣ ಮಾಡಿದ್ದ. ‘ಬಂಧಿತನನ್ನು ನಮಗೆ ಒಪ್ಪಿಸಿ, ನಾವೇ ನೋಡಿಕೊಳ್ಳುತ್ತೇವೆ. ಪ್ರವಾದಿಗೆ ಅವಮಾನ ಮಾಡಿದವನನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಹೇಳಿದ್ದ. ಅಲ್ಲದೇ ಘೋಷಣೆಗಳನ್ನು ಕೂಗಿದ್ದ. ಈ ವಿಡಿಯೋ ಸೋಮವಾರ ಬೆಳಗ್ಗೆ ವೈರಲ್ ಆಗಿತ್ತು. ಆಗಿನಿಂದ ಈತ ನಾಪತ್ತೆಯಾಗಿದ್ದಾನೆ. ಪೊಲೀಸರು ಈತನ ಬಂಧನಕ್ಕೆ ಜಾಲ ಬೀಸಿದ್ದಾರೆ.