ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆ ಸ್ಥಳ ಪರಿಶೀಲನೆಗೆ ತಡೆ: ಸ್ಪೀಕರ್‌ ವಿರುದ್ಧ ಹೆಚ್.ಕೆ. ಪಾಟೀಲ್‌ ಕಿಡಿ

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ರಮಕ್ಕೆ ಹೆಚ್.ಕೆ.ಪಾಟೀಲ್‌ ಖಂಡನೆ| ಪತ್ರದ ಮೂಲಕ ಕಿಡಿ ಕಾಡಿದ ಪಾಟೀಲ್‌|  ಇದು ಸಂವಿಧಾನ ಮತ್ತು ಕಾನೂನಾತ್ಮಕ ವ್ಯವಸ್ಥೆಯನ್ನ ಬುಡಮೇಲು ಮಾಡುತ್ತದೆ|ವಿಧಾನ ಮಂಡಲದ ಸಮಿತಿಗಳ ಅಧಿಕಾರವನ್ನ ಮೊಟಕು ಮಾಡುವ ಪ್ರಯತ್ನವನ್ನ ಕೈಬಿಡಿ|

First Published May 29, 2020, 11:27 AM IST | Last Updated May 29, 2020, 11:27 AM IST

ಬೆಂಗಳೂರು(ಮೇ.29): ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆ ಸ್ಥಳ ಪರಿಶೀಲನೆಗೆ ತಡೆ ನೀಡಿರುವ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕ್ರಮವನ್ನ ಮಾಜಿ ಸಚಿವ ಹೆಚ್.ಕೆ.ಪಾಟೀಲ್‌ ಅವರು ಖಂಡಿಸಿದ್ದಾರೆ. ಇದು ಸಂವಿಧಾನ ಮತ್ತು ಕಾನೂನಾತ್ಮಕ ವ್ಯವಸ್ಥೆಯನ್ನ ಬುಡಮೇಲು ಮಾಡುತ್ತದೆ ಎಂದು ಪತ್ರದ ಮೂಲಕ ಕಿಡಿ ಕಾರಿದ್ದಾರೆ.

ಆಪರೇಷನ್ ಯಡಿಯೂರಪ್ಪ: ಬಿಜೆಪಿ ಅತೃಪ್ತ ಶಾಸಕರ 4 ಬೇಡಿಕೆಗಳಿವು!

ವಿಧಾನ ಮಂಡಲದ ಸಮಿತಿಗಳ ಅಧಿಕಾರವನ್ನ ಮೊಟಕು ಮಾಡುವ ಪ್ರಯತ್ನವನ್ನ ಕೈಬಿಡಿ ಎಂದು ಆಗ್ರಹಿಸಿದ್ದಾರೆ. ಲಘು ಪ್ರಕರಟಣೆ 104 ಹಿಂಪಡೆದು  ಭ್ರಷ್ಟಾಚಾರವನ್ನು ತನಿಖೆ ಮಾಡುವ ನಿರ್ಭಯ ನಿರ್ಧಾಕ್ಷಿಣ್ಯ ವಾತಾವರಣ ಸೃಷ್ಠಿಸಿ ಎಂದು ಹೇಳಿದ್ದಾರೆ.