Asianet Suvarna News Asianet Suvarna News

ಬೆಂಗಳೂರಿನಲ್ಲಿ ಶತಮಾನ ಕಂಡರಿಯದ ಮಳೆ, 113 ವರ್ಷದ ಮೇ ತಿಂಗಳ ದಾಖಲೆ

 ‘ಬೆಂಗಳೂರು ನಗರದ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಮಳೆ’ (Bengaluru Rain) ಎಂಬ ದಾಖಲೆ ಬರೆದಿದೆ ಈ ಮಳೆ.  113 ವರ್ಷದ ಮೇ ತಿಂಗಳಲ್ಲೇ ಕಂಡು ಕೇಳರಿಯದ ಮಳೆ ಹಾಗೂ 1909ರ ನಂತರ ಮೇ ತಿಂಗಳಲ್ಲಿ ಸುರಿದ 2ನೇ ಅತ್ಯಧಿಕ ವರ್ಷಧಾರೆ ಇದಾಗಿದೆ. 

ಬೆಂಗಳೂರು (ಮೇ.19):  ‘ಬೆಂಗಳೂರು ನಗರದ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಮಳೆ’ (Bengaluru Rain) ಎಂಬ ದಾಖಲೆ ಬರೆದಿದೆ ಈ ಮಳೆ.  113 ವರ್ಷದ ಮೇ ತಿಂಗಳಲ್ಲೇ ಕಂಡು ಕೇಳರಿಯದ ಮಳೆ ಹಾಗೂ 1909ರ ನಂತರ ಮೇ ತಿಂಗಳಲ್ಲಿ ಸುರಿದ 2ನೇ ಅತ್ಯಧಿಕ ವರ್ಷಧಾರೆ ಇದಾಗಿದೆ. 

ಒಂದು ತಾಸು ಸುರಿದ ಮಳೆಗೆ ಮುಳುಗಿತು ಬೆಂಗಳೂರು, ಜನಜೀವನ ತತ್ತರ

ಕೇವಲ 2 ತಾಸಿನಲ್ಲಿ11.46 ಸೆಂ.ಮೀ. ಮಳೆಯಾಗಿದೆ. ವರುಣನ (Rain) ಈ ರುದ್ರನರ್ತನಕ್ಕೆ ಸಾವಿರಾರು ಮನೆಗಳಿಗೆ ನೀರು ನುಗ್ಗಿ ದಿನಸಿ, ನಿತ್ಯ ಬಳಕೆಯ ವಸ್ತುಗಳು ಹಾಳಾಗಿದೆ. ತಗ್ಗು ಪ್ರದೇಶದ ಹಲವಾರು ಪ್ರದೇಶಗಳು ಅಕ್ಷರಶಃ ದ್ವೀಪಗಳಾಗಿ ಮಾರ್ಪಟ್ಟರೆ, ನೂರಾರು ವಾಹನಗಳು ನೀರಿನಲ್ಲಿ ಮುಳುಗಿವೆ. ತೊಂದರೆಗೆ ಒಳಗಾದ ಜನರು ರಾತ್ರಿ ಇಡೀ ನೀರು ಹೊರ ಹಾಕಲು ಪರದಾಡಿದ್ದಾರೆ. ಅನೇಕರು ಬೇರೆ ಕಡೆ ಆಶ್ರಯಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮುಂಗಾರು ಪೂರ್ವ ಮಳೆ ಸುರಿಯುವ ಮೇ ತಿಂಗಳಲ್ಲಿ 1957ರಲ್ಲಿ 28.71 ಸೆಂ.ಮೀ ಮಳೆಯಾಗಿರುವುದು ಈವರೆಗಿನ ದಾಖಲೆ. ಕಳೆದ 17 ದಿನದಲ್ಲಿ ನಗರದಲ್ಲಿ 24.91 ಮಿಮೀ ಮಳೆ ಸುರಿದಿದೆ. ತಿಂಗಳು ಪೂರ್ಣಗೊಳ್ಳಲು ಇನ್ನೂ ಹದಿನಾಲ್ಕು ದಿನ ಬಾಕಿ ಇದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ವಾರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ದಾಖಲೆ ನಿರ್ಮಾಣವಾಗುವ ಸಂಭವವೇ ಹೆಚ್ಚು. ಕಳೆದ ಹತ್ತು ವರ್ಷದಲ್ಲಿ (2012-2022)ರ ಅವಧಿಯಲ್ಲಿ ಅತಿ ಹೆಚ್ಚು ಎಂದರೆ 2017ರಲ್ಲಿ 24.19 ಸೆಂ.ಮೀ ಮಳೆಯಾಗಿತ್ತು. ಈ ದಾಖಲೆ ಈಗಾಗಲೇ ಮುರಿದು ಬಿದ್ದಿದೆ.

 

Video Top Stories