Asianet Suvarna News Asianet Suvarna News

ಮನೆಗೆ ಹೊರಟಿದ್ದ ಶ್ರೀರಾಮುಲುವನ್ನು ಸಭೆಗೆ ಕರೆಸಿಕೊಂಡ ಸಿಎಂ ಬಿಎಸ್‌ವೈ..!

ಸಚಿವ ಸಂಪುಟ ಸಭೆ ಮುಗಿಯುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪ ಹಿರಿಯ ಸಚಿವರ ಪ್ರತ್ಯೇಕ ಸಭೆ ಕರೆದರು. ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಮುಖ್ಯ ಕಾರ್ಯದರ್ಶಿ ವಿಜಯ್ ಬಾಸ್ಕರ್ ಈ ಸಭೆಯಲ್ಲಿ ಪಾಲ್ಗೊಂಡರು.

ಬೆಂಗಳೂರು(ಜು.23): ಮೆಡಿಕಲ್ ಕಿಟ್ ಖರೀದಿಯಲ್ಲಿ ರಾಜ್ಯ ಸರ್ಕಾರ ಸುಮಾರು ಎರಡು ಸಾವಿರ ಕೋಟಿ ಹಗರಣ ಮಾಡಿದೆ ಎಂದು ವಿಪಕ್ಷ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಸಚಿವ ಸಂಪುಟ ಸಭೆ ಮುಗಿಯುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪ ಹಿರಿಯ ಸಚಿವರ ಪ್ರತ್ಯೇಕ ಸಭೆ ಕರೆದರು. ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಮುಖ್ಯ ಕಾರ್ಯದರ್ಶಿ ವಿಜಯ್ ಬಾಸ್ಕರ್ ಈ ಸಭೆಯಲ್ಲಿ ಪಾಲ್ಗೊಂಡರು.

ಸತ್ಯ ಧಾನ್ಯ, ಸುಳ್ಳು ತೌಡು...ಸಿದ್ದರಾಮಯ್ಯಗೆ ಸಚಿವ ಸುಧಾಕರ್ ಸತ್ಯದ ಪಾಠ!

ಸಚಿವ ಸಂಪುಟ ಸಭೆ ಮುಗಿಸಿ ಮನೆ ಕಡೆ ಹೊರಟಿದ್ದ ಶ್ರೀರಾಮುಲು ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅರ್ಧದಾರಿಯಿಂದಲೇ ವಾಪಾಸ್ ಕರೆಸಿಕೊಂಡಿದ್ದಾರೆ. ಜತೆಗೆ ಈ ಸಭೆಯಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಸರ್ಕಾರ ಯಾವ ರೀತಿ ಉತ್ತರಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories