Asianet Suvarna News Asianet Suvarna News

'ಗಲಭೆ ಹಿಂದೆ ಯಾರೇ ಇರಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು': ಎಚ್‌ಡಿಕೆ

ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ವರದಿ ಮಾಡಲು ಹೋಗಿದ್ದಾಗ ಸುವರ್ಣ ನ್ಯೂಸ್ ವರದಿಗಾರರ ಮೇಲೆ ನಡೆದ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. 

 

ಬೆಂಗಳೂರು (ಆ. 12): ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ವರದಿ ಮಾಡಲು ಹೋಗಿದ್ದಾಗ ಸುವರ್ಣ ನ್ಯೂಸ್ ವರದಿಗಾರರ ಮೇಲೆ ನಡೆದ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. 

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸುವರ್ಣ ನ್ಯೂಸ್ ಜೊತೆ ಮಾತನಾಡಿ, ಮಾಧ್ಯಮ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದು ನಿಜಕ್ಕೂ ಖಂಡನೀಯ.  ಇಂತಹ ದುಷ್ಟ ಕೃತ್ಯಗಳನ್ನು ಮಾಡುವವರನ್ನು ಅವರ ಸಮುದಾಯದವರೇ ಖಂಡಿಸಬೇಕು. ಘಟನೆ ಹಿಂದೆ ಯಾರೇ ಇರಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ' ಎಂದು ಎಚ್‌ಡಿಕೆ ಹೇಳಿದ್ದಾರೆ. 

ಬೆಂಗಳೂರು ಗಲಭೆ: ಸುವರ್ಣ ನ್ಯೂಸ್ ಪ್ರತಿನಿಧಿ ಮೇಲೆ ಹಲ್ಲೆ, ಕಾರು ಜಖಂ, ಕ್ಯಾಮೆರಾ ಪುಡಿ ಪುಡಿ