Asianet Suvarna News Asianet Suvarna News

'ಇದೊಂದು ನಾಟಕೀಯ ಪ್ಯಾಕೇಜ್, ಎಕರೆಗೆ 3 ಸಾವಿರ ಎಲ್ಲಿಗೆ ಸಾಕಾಗುತ್ತೆ ಮುಖ್ಯಮಂತ್ರಿಗಳೇ.'?

-  ಎಕರೆಗೆ ಮೂರು ಸಾವಿರ ಎಲ್ಲಿಗೆ ಸಾಕಾಗುತ್ತೆ.? ಎಚ್‌ಡಿಕೆ ಪ್ರಶ್ನೆ

- ಕನಿಷ್ಠ 10 ಸಾವಿರ ರೂ ಘೋಷಿಸಬೇಕಿತ್ತು

- ಕಳೆದ ಬಾರಿಯ ಹಣವೇ ಇನ್ನೂ ಬಂದಿಲ್ಲ 

ಬೆಂಗಳೂರು (ಮೇ. 19): ಸರ್ಕಾರದ ಆರ್ಥಿಕ ಪ್ಯಾಕೇಜ್‌ ಬಗ್ಗೆ ಮಾಜಿ  ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಇದೊಂದು ನಾಟಕೀಯ ಪ್ಯಾಕೇಜ್. ಎಕರೆಗೆ ಮೂರು ಸಾವಿರ ಎಲ್ಲಿಗೆ ಸಾಕಾಗುತ್ತೆ.? ಇನ್ನು ಆಟೋ ಚಾಲಕರಿಗೂ ಟೋಪಿ ಹಾಕಿದ್ದಾರೆ. ಈ ಪ್ಯಾಕೇಜ್ ನಿರಾಶದಾಯಕವಾಗಿದೆ' ಎಂದಿದ್ದಾರೆ.

ರೈತರಿಗೆ ಬೆಂಬಲ ಬೆಲೆಯಿಲ್ಲ, ಬಡವರ ಬಗ್ಗೆ ಚಿಂತನೆಯಿಲ್ಲ, ಇದ್ಯಾವ ಸೀಮೆ ಪ್ಯಾಕೇಜ್ರಿ.?

'ಸರ್ಕಾರದ ಬೇಜವಾಬ್ದಾರಿಯಿಂದ ಜನ ಸಂಕಷ್ಟದಲ್ಲಿದ್ದಾರೆ. ನಾಡಿನ ಜನತೆ ಮೇಲೆ ಗೌರವ ಇದ್ದಿದ್ದರೆ, ಕನಿಷ್ಠ 10 ಸಾವಿರ ಹಣ ನೀಡುತ್ತಿದ್ರಿ. ಈ ಹಣ ಜನರಿಗೆ ಎಷ್ಟರ ಮಟ್ಟಿಗೆ ತಲುಪುತ್ತದೋ ಗೊತ್ತಿಲ್ಲ. ಹಣ ತಲುಪಲು ಸೂಕ್ತ ವ್ಯವಸ್ಥೆ ಮಾಡಬೇಕು' ಎಂದು ಒತ್ತಾಯಿಸಿದ್ಧಾರೆ. 

Video Top Stories