ಡಿ.6 ರೊಳಗೆ ಈದ್ಗಾ ಮೈದಾನದ ಗೋಡೆ ಕೆಡವಬೇಕು ಎಂದ ಹಿಂದೂ ಮುಖಂಡ ಭಾಸ್ಕರನ್ ವಿರುದ್ಧ FIR

ಬಾಬರಿ ಮಸೀದಿ ಮಾದರಿಯಲ್ಲೇ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿನ ಗೋಡೆ ಕೆಡುವುದಾಗಿ ಹೇಳಿಕೆ ನೀಡಿದ್ದ ಹಿಂದೂ ಪರ ಸಂಘಟನೆ ಮುಖಂಡ ಭಾಸ್ಕರನ್‌ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಚಾಮರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

First Published Aug 10, 2022, 10:34 AM IST | Last Updated Aug 10, 2022, 10:37 AM IST

ಬೆಂಗಳೂರು (ಆ.10): ಬಾಬರಿ ಮಸೀದಿ ಮಾದರಿಯಲ್ಲೇ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿನ ಗೋಡೆ ಕೆಡುವುದಾಗಿ ಹೇಳಿಕೆ ನೀಡಿದ್ದ ಹಿಂದೂ ಪರ ಸಂಘಟನೆ ಮುಖಂಡ ಭಾಸ್ಕರನ್‌ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಚಾಮರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬಿಬಿಎಂಪಿ ಚುನಾವಣೆ: 243 ವಾರ್ಡ್ ಮೀಸಲಾತಿ ಕರಡುಪಟ್ಟಿಗೆ ಹೆಚ್ಚಿದ ವಿರೋಧ

ಡಿ.6 ರಂದು ಬಾಬರಿ ಮಸೀದಿಗೆ ಧ್ವಂಸ ದಿನ. ಅದೂ ಮುಸ್ಲಿಂ ಸಮುದಾಯದವರಿಗೆ ಬ್ಲಾಕ್‌ ಡೇ ಆಗಿದೆ. ಆ ದಿನವೇ ಚಾಮರಾಜಪೇಟೆ ಈದ್ಗಾ ಮೈದಾನದ ಗೋಡೆ ಧ್ವಂಸಗೊಳಿಸಲಾಗುತ್ತದೆ. ಈ ದಿನಾಂಕವನ್ನು ಬರೆದಿಟ್ಟುಕೊಳ್ಳಿ. ಈಗಾಗಲೇ ಈ ಸಂಬಂಧ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಹೊರ ರಾಜ್ಯಗಳ ಹಿಂದೂ ಸಂಘಟನೆಗಳ ಮುಖಂಡರ ಜತೆ ಸಂಪರ್ಕದಲ್ಲಿದ್ದೇವೆ. ಆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿ ಗೋಡೆ ಕೆಡುವುತ್ತೇವೆ ಎಂದು ವಿಶ್ವ ಸನಾತನ ಪರಿಷತ್‌ ಅಧ್ಯಕ್ಷ ಭಾಸ್ಕರನ್‌ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.