Asianet Suvarna News

ಡಿಕೆಶಿಗೆ ಇನ್ನೂ ವಯಸ್ಸಿದೆ, 2023 ಕ್ಕೆ ಸಿದ್ದರಾಮಯ್ಯನವರೇ ಸಿಎಂ: ಹರಿಹರ ಶಾಸಕ

Jun 23, 2021, 4:10 PM IST

ಬೆಂಗಳೂರು (ಜೂ. 23): ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಹುದ್ದೆ ವಾರ್ ಮುಂದುವರೆದಿದೆ. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಲಿ ಎನ್ನುವ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ಇತರ ಶಾಸಕರೂ ಬಹುಪರಾಕ್ ಎಂದಿದ್ಧಾರೆ.

ಮುಂದಿನ ಸಿಎಂ: ತಮ್ಮ ಪರ ಲಾಬಿ ಮಾಡ್ತಿರುವ ಶಾಸಕರ ಬಗ್ಗೆ ಸಿದ್ದು ಪ್ರತಿಕ್ರಿಯಿಸಿದ್ದು ಹೀಗೆ

'ಸಿದ್ದರಾಮಯ್ಯನವರೇ ಸಿಎಂ ಆಗಬೇಕೆಂಬುದು ಜನರ ಹಾಗೂ ಕಾಂಗ್ರೆಸ್ ಶಾಸಕರ ಅಭಿಪ್ರಾಯ. ಡಿಕೆಶಿಗೂ ಇನ್ನೂ ವಯಸ್ಸಿದೆ. ಮುಂದೆ ಬೇಕಾದರೆ ಸಿಎಂ ಆಗಬಹುದು. 2023 ಕ್ಕೆ ಸಿದ್ದರಾಮಯ್ಯನವರೇ ಸಿಎಂ ಎಂದು ಹರಿಹರ ಶಾಸಕ ರಾಮಪ್ಪ ಹೇಳಿದ್ದಾರೆ.