Asianet Suvarna News Asianet Suvarna News

ಹನುಮಂತನ ಗುಡಿಯಲ್ಲಿ ಏಸು ಫೋಟೋ ವಿವಾದ: ಜನರ ಕ್ಷಮೆಯಾಚಿಸಿದ ಅರ್ಚಕ ರಾಘವನ್

ಹನುಮಾನ್ ದೇವಸ್ಥಾನದಲ್ಲಿ ಏಸು ಕ್ರಿಸ್ತನ ಫೋಟೋ ಇಟ್ಟು ಪೂಜಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.  ಚಾಮರಾಜನಗರದ ಕೊಳ್ಳೇಗಾಲ ಅಂಜನೇಯ ದೇವಸ್ಥಾನ ಈ ವಿವಾದಕ್ಕೆ ಕಾರಣವಾಗಿದೆ. ಆಗಸ್ಟ್ 5 ರಂದು ಘಟನೆ ನಡೆದಿದ್ದು ಅಂದಿನಿಂದ ಅರ್ಚಕರ ಮೊಬೈಲ್‌ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಹನುಮಂತನ ವಿಗ್ರಹದ ಕೆಳಗೆ ಏಸು ಕ್ರಿಸ್ತನ ಫೋಟೋ ಇಟ್ಟು ಪೂಜೆ ಮಾಡಲಾಗಿತ್ತು. ದೇವಸ್ಥಾನದೊಳಗೆ ಏಸುಫೋಟೋ ಬಂದಿದ್ದು ಹೇಗೆ? ಕ್ರೈಸ್ತ ಮಿಷನರಿಗಳ ಜೊತೆ ಕೈ ಜೋಡಿಸಿದ್ರಾ ಅರ್ಚಕ?  ಎಂಬ ಆರೋಪ ಕೇಳಿ ಬಂದಿತ್ತು. 
 

ಬೆಂಗಳೂರು (ಆ. 11): ಹನುಮಾನ್ ದೇವಸ್ಥಾನದಲ್ಲಿ ಏಸು ಕ್ರಿಸ್ತನ ಫೋಟೋ ಇಟ್ಟು ಪೂಜಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.  ಚಾಮರಾಜನಗರದ ಕೊಳ್ಳೇಗಾಲ ಅಂಜನೇಯ ದೇವಸ್ಥಾನ ಈ ವಿವಾದಕ್ಕೆ ಕಾರಣವಾಗಿದೆ. ಆಗಸ್ಟ್ 5 ರಂದು ಘಟನೆ ನಡೆದಿದ್ದು ಅಂದಿನಿಂದ ಅರ್ಚಕರ ಮೊಬೈಲ್‌ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ.

ಹನುಮಂತನ ವಿಗ್ರಹದ ಕೆಳಗೆ ಏಸು ಕ್ರಿಸ್ತನ ಫೋಟೋ ಇಟ್ಟು ಪೂಜೆ ಮಾಡಲಾಗಿತ್ತು. ದೇವಸ್ಥಾನದೊಳಗೆ ಏಸುಫೋಟೋ ಬಂದಿದ್ದು ಹೇಗೆ? ಕ್ರೈಸ್ತ ಮಿಷನರಿಗಳ ಜೊತೆ ಕೈ ಜೋಡಿಸಿದ್ರಾ ಅರ್ಚಕ?  ಎಂಬ ಆರೋಪ ಕೇಳಿ ಬಂದಿತ್ತು. ಈಗ ಅರ್ಚಕ ರಾಘವನ್ ಜನರ ಕ್ಷಮೆಯಾಚಿಸಿದ್ದಾರೆ. ಯಾವುದೇ ದುರುದ್ದೇಶದಿಂದ ಇದನ್ನು ಮಾಡಿಲ್ಲ. ಮುಂದೆ ಇಂತಹ ಪ್ರಮಾದ ಅಗದಂತೆ ನೋಡಿಕೊಳ್ಳುತ್ತೇವೆ' ಎಂದಿದ್ದಾರೆ. 

ಭಜರಂಗಿ ಗರ್ಭಗುಡಿಯಲ್ಲಿ ಏಸು ಫೋಟೋ; ಮತಾಂತರಕ್ಕೆ ಕೈ ಜೋಡಿಸಿದ್ರಾ ಅರ್ಚಕ.?