ಸದನಕ್ಕೆ ಬಂದ ಗೃಹಲಕ್ಷ್ಮೀಯರು: 21 ಮಹಿಳೆಯರನ್ನು ಸುವರ್ಣಸೌಧಕ್ಕೆ ಕರೆದೊಯ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಗೃಹಲಕ್ಷ್ಮೀ ಯೋಜನೆಯ ಹಣದಿಂದ ಬದುಕು ಕಟ್ಟಿಕೊಂಡ 21 ಮಹಿಳೆಯರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸುವರ್ಣ ಸೌಧಕ್ಕೆ ಕರೆದೊಯ್ದರು, ಅಲ್ಲಿ ಅವರು ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿಯಾಗಿ ವಿಧಾನಸಭೆ ಅಧಿವೇಶನ ವೀಕ್ಷಿಸಲಿದ್ದಾರೆ.

First Published Dec 18, 2024, 3:58 PM IST | Last Updated Dec 18, 2024, 3:58 PM IST

ಬೆಳಗಾವಿ:  ಗೃಹಲಕ್ಷ್ಮೀ ಯೋಜನೆ ಹಣದಿಂದ ಬದುಕು ಕಟ್ಟಿಕೊಂಡ 21 ಮಹಿಳೆಯರು ಇಂದು ಸುವರ್ಣ ಸೌಧಕ್ಕೆ ಆಗಮಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್21 ಮಹಿಳೆಯರನ್ನು ಸುವರ್ಣಸೌಧಕ್ಕೆ ಕರೆದೊಯ್ದರು. ಬೆಳಗಾವಿಯ ಕುವೆಂಪು ನಗರದ ಸಚಿವರ ನಿವಾಸದಿಂದ ಸೌಧ ಈ ಗೃಹಲಕ್ಷ್ಮಿಯರು ಆಗಮಿಸಿದರು. ಗೃಹಲಕ್ಷ್ಮೀ ಹಣದಿಂದ ಬೋರ್‌ವೆಲ್ ಕೊರೆಯಿಸಿದವರು, ಊರಿಗೆ ಹೋಳಿಗೆ ಊಟ ಬಡಿಸಿದವರು, ಫ್ಯಾನ್ಸಿ ಸ್ಟೋರ್, ವೆಜಿಟೆಬಲ್ ಸ್ಟೋರ್ ತೆರೆದವರು 
ಹೀಗೆ ಯೋಜನೆ ಲಾಭ ಪಡೆದು ಬದುಕು ಕಟ್ಟಿಕೊಂಡವರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಕರೆಯಿಸಿದ್ದರು. ಬಳಿಕ ಗೃಹಲಕ್ಷ್ಮೀ ಫಲಾನುಭವಿಗಳ ಜೊತೆ ಟಿಟಿ ವಾಹನದಲ್ಲಿ ಸುವರ್ಣಸೌಧಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೆರಳಿದರು. ಈ ಗೃಹ ಲಕ್ಷ್ಮಿಯರು ಸಿಎಂ, ಡಿಸಿಎಂ ಭೇಟಿಯಾಗಿ ಸಂವಾದ ನಡೆಸಲಿದ್ದಾರೆ. ಬಳಿಕ ವಿಧಾನಸಭೆ ಅಧಿವೇಶನದ ಕಲಾಪ ವೀಕ್ಷಣೆ ಮಾಡಲಿದ್ದಾರೆ.