Shivamogga: 48 ಎಕರೆ ಪ್ರದೇಶದಲ್ಲಿ ಗೋಶಾಲೆ ಶೀಘ್ರವಾಗಿ ನಿರ್ಮಾಣ: ಪ್ರಭು ಚೌಹ್ಹಾಣ್

ಹೊಸನಗರ ತಾಲೂಕಿನ ರಾಮಚಂದ್ರಾಪುರ ಮಠದ ಗೋಲೋಕದಲ್ಲಿರುವ ಗೋವರ್ಧನಗಿರಿಧಾರಿ ದೇವಸ್ಥಾನದ ವರ್ಧಂತ್ಯುತ್ಸವದ ಸಾಮೂಹಿಕ ವಿಷ್ಣುಪಾರಾಯಣ ಪಾರಾಯಣ ಸಮರ್ಪಣೆ, ರಜತ ಕವಚ, ಛತ್ರ ಸಮರ್ಪನೆಯ ಕೃಷ್ಣಾರ್ಪಣಂ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚೌಹ್ಹಾಣ್ ಭಾಗಿಯಾದರು. 

First Published Mar 14, 2022, 10:26 AM IST | Last Updated Mar 14, 2022, 11:17 AM IST

ಶಿವಮೊಗ್ಗ (ಮಾ. 14): ಹೊಸನಗರ ತಾಲೂಕಿನ ರಾಮಚಂದ್ರಾಪುರ ಮಠದ ಗೋಲೋಕದಲ್ಲಿರುವ ಗೋವರ್ಧನಗಿರಿಧಾರಿ ದೇವಸ್ಥಾನದ ವರ್ಧಂತ್ಯುತ್ಸವದ ಸಾಮೂಹಿಕ ವಿಷ್ಣುಪಾರಾಯಣ ಪಾರಾಯಣ ಸಮರ್ಪಣೆ, ರಜತ ಕವಚ, ಛತ್ರ ಸಮರ್ಪನೆಯ ಕೃಷ್ಣಾರ್ಪಣಂ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚೌಹ್ಹಾಣ್ ಭಾಗಿಯಾದರು. 

Basanagouda Patil Yatnal ಅವ್ರ ಕಾಲ್ ಹಿಡ್ಕೊಂಡು ರಾಜೀನಾಮೆ ಕೊಡ್ಬೇಡಿ ಅಂತಾ ಬೇಡ್ಕೋತಾರೆ!

ರಾಮಚಂದ್ರಾಪುರ ಶ್ರೀಗಳಂತೆ ರಾಜ್ಯದ ನೂರು ಸ್ವಾಮೀಜಿಗಳು ಗೋಮಾತೆಯ ರಕ್ಷಣೆಗಾಗಿ ಗೋಶಾಲೆ ನಿರ್ಮಿಸಿದರೇ ಗೋವುಗಳು ಕಸಾಯಿಖಾನೆಗೆ ಹೋಗುವುದಿಲ್ಲ. ರಾಜ್ಯದಲ್ಲಿ ಗೋವುಗಳ ರಕ್ಷಣೆಗಾಗಿ ಕಳೆದೊಂದು ವರ್ಷದಿಂದ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 50 ರಿಂದ 100 ಎಕರೆಗಳಷ್ಟುಪ್ರದೇಶದಲ್ಲಿ ಗೋಶಾಲೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಈಗಾಗಲೇ ರಾಜ್ಯದಲ್ಲಿ 24 ಗೋಶಾಲೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಶಿವಮೊಗ್ಗದಲ್ಲಿಯೂ 48 ಎಕರೆ ಪ್ರದೇಶದಲ್ಲಿ ಗೋಶಾಲೆ ಶೀಘ್ರವಾಗಿ ನಿರ್ಮಾಣ ಆಗಲಿದೆ ಎಂದರು.

ರಾಜ್ಯದಲ್ಲಿ 400 ಪಶುವೈದ್ಯರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಕ್ರಮವಾಗಿ ಖಾಸಾಯಿ ಖಾನೆಗೆ ಹೋಗುತ್ತಿದ್ದ 12 ಸಾವಿರ ಗೋವುಗಳ ರಕ್ಷಣೆಯನ್ನು ಸರ್ಕಾರ ಮಾಡಿದೆ. 600ಕ್ಕೂ ಹೆಚ್ಚು ಅಕ್ರಮ ಗೋವುಗಳ ಕಳ್ಳ ಸಾಗಾಣಿಕೆ ಪ್ರಕರಣ ದಾಖಲು ಮಾಡಿದ್ದೇವೆ. ಕೆಲವರು ಗೋವುಗಳ ರಕ್ಷಣೆಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಆದರೆ, ಸಂವಿಧಾನದ ಮೇಲೆ ನಮಗೆ ನಂಬಿಕೆಯಿದ್ದು ಅಂತಿಮವಾಗಿ ಗೋಮಾತೆಗೆ ವಿಜಯ ಲಭಿಸಲಿದೆ ಎಂದರು.

Video Top Stories