ಕಳ್ಳದಾರಿಯಲ್ಲಿ ಮಹಾರಾಷ್ಟ್ರಕ್ಕೆ ಹೋದ ಬಾಲಕಿಗೆ ಕೊರೊನಾ ಸೋಂಕು

ಕಳ್ಳದಾರಿಯಲ್ಲಿ ಮಹಾರಾಷ್ಟ್ರಕ್ಕೆ ಹೋಗಿದ್ದ ಬಾಲಕಿಗೆ ಕೊರೊನಾ ಕಾಣಿಸಿಕೊಂಡಿದೆ. ಈ ಬಾಲಕಿ ಕುಡುಚಿಯಿಂದ ಮಹಾರಾಷ್ಟ್ರಕ್ಕೆ ಹೋಗಿದ್ದಳು ಎನ್ನಲಾಗಿದ್ದು, ಕುಡುಚಿ ಪಟ್ಟಣದ ಎರಡು ವಾರ್ಡ್‌ಗಳನ್ನು ಸೀಲ್ ಡೌನ್ ಮಾಡಲಾಗಿದೆ. 
 

First Published May 26, 2020, 9:52 AM IST | Last Updated May 26, 2020, 9:54 AM IST

ಬೆಂಗಳೂರು (ಮೇ. 26): ಕಳ್ಳದಾರಿಯಲ್ಲಿ ಮಹಾರಾಷ್ಟ್ರಕ್ಕೆ ಹೋಗಿದ್ದ ಬಾಲಕಿಗೆ ಕೊರೊನಾ ಕಾಣಿಸಿಕೊಂಡಿದೆ. ಈ ಬಾಲಕಿ ಕುಡುಚಿಯಿಂದ ಮಹಾರಾಷ್ಟ್ರಕ್ಕೆ ಹೋಗಿದ್ದಳು ಎನ್ನಲಾಗಿದ್ದು, ಕುಡುಚಿ ಪಟ್ಟಣದ ಎರಡು ವಾರ್ಡ್‌ಗಳನ್ನು ಸೀಲ್ ಡೌನ್ ಮಾಡಲಾಗಿದೆ. 

ಮಾಗಡಿಯ 2 ವರ್ಷದ ಮಗುವಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ತಂದೆ, ತಾಯಿ ಹಾಗೂ ಅಜ್ಜಿಯನ್ನು ಕ್ವಾರಂಟೈನ್‌ಗೆ ಶಿಫ್ಟ್ ಮಾಡಲಾಗಿದೆ. 

ಹೊರ ರಾಜ್ಯಗಳಿಂದ ಚಿಕ್ಕಮಗಳೂರು ಜಿಲ್ಲೆಗೆ 536 ಮಂದಿ ಆಗಮನ

ಭಾರೀ ಗಾಳಿ ಮಳೆಗೆ ಚೆಕ್ ಪೋಸ್ಟ್ ಹಾರಿ ಹೋಗಿದೆ. ಕೊರೊನಾ ವಾರಿಯರ್ಸ್ ಇದ್ದ ಟೆಂಟ್ ಮುರಿದು ಬಿದ್ದಿದೆ. ಆನೇಕಲ್ ಅತ್ತಿಬೆಲೆಯಲ್ಲಿ ಈ ಘಟನೆ ನಡೆದಿದೆ. 

ನಿನ್ನೆಯಿಂದ ದೇಶೀಯ ವಿಮಾನ ಹಾರಾಟ ಆರಂಭವಾಗಿದ್ದು ಮೈಸೂರಿನಿಂದ ಬೆಳಗಾವಿಗೆ ಜನರೇ ಬಾರದೇ ವಿಮಾನ  ಹಾರಾಟ ರದ್ದಾಗಿದೆ.