Asianet Suvarna News Asianet Suvarna News

ವಿಶ್ವಕ್ಕೆ ಸಂದೇಶ ಸಾರುವ ನಾಡಪ್ರಭು ಕೆಂಪೇಗೌಡ ಪ್ರತಿಮೆ-ಸೆಂಟ್ರಲ್ ಪಾರ್ಕ್

ವಿಶ್ವ ವಿಖ್ಯಾತ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಅವರಿ ಜನಿಸಿ ಜೂನ್ 27 ಕ್ಕೆ 511 ವರ್ಷ. ಬೆಂಗಳೂರನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಿಸಿದ ಕೆಂಪೇಗೌಡ್ರ ಸ್ಮರಣೆಯನ್ನು ಸರ್ಕಾರ ವಿಶಿಷ್ಟವಾಗಿ ಮಾಡಲು ಮುಂದಾಗಿದೆ. ಕೆಂಪೇಗೌಡ್ರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲು ಸರ್ಕಾರ ಅಡಿಗಲ್ಲು ಹಾಕಿದೆ. 

ಬೆಂಗಳೂರು (ಜೂ. 28): ವಿಶ್ವ ವಿಖ್ಯಾತ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಅವರಿ ಜನಿಸಿ ಜೂನ್ 27 ಕ್ಕೆ 511 ವರ್ಷ. ಬೆಂಗಳೂರನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಿಸಿದ ಕೆಂಪೇಗೌಡ್ರ ಸ್ಮರಣೆಯನ್ನು ಸರ್ಕಾರ ವಿಶಿಷ್ಟವಾಗಿ ಮಾಡಲು ಮುಂದಾಗಿದೆ. ಕೆಂಪೇಗೌಡ್ರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲು ಸರ್ಕಾರ ಅಡಿಗಲ್ಲು ಹಾಕಿದೆ. 

ಹಾಗಾದರೆ ಯಾರು ಈ ಕೆಂಪೇಗೌಡ? ಕರುನಾಡಿನ ರಾಜಧಾನಿ ಬೆಂಗಳೂರಿಗೆ ಹೊರದೇಶ, ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಪ್ರಥಮ ಬಾರಿಗೆ ಆಗಮಿಸುವವರಿಗೆ ಎದುರಾಗುವ ಮೊದಲ ಪ್ರಶ್ನೆಯೇ ಇದು!

ವಿಜಯನಗರದ ವೈಭವ ಕಂಡು ಬೆಂಗಳೂರು ಕಟ್ಟಿದ್ದರು ಕೆಂಪೇಗೌಡ್ರು

ದೂರದೂರದ ಊರುಗಳಿಂದ ಜನರನ್ನು ಹೊತ್ತ ಬರುವ ಹಲವು ಬಸ್‌ಗಳು ಕೊನೆಗೊಳ್ಳುವುದೇ ‘ಕೆಂಪೇಗೌಡ’ ನಿಲ್ದಾಣದಲ್ಲಿ. ರೈಲಿನಿಂದ ಇಳಿದು ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆ ‘ಕೆಂಪೇಗೌಡ’ ಬಸ್‌ ನಿಲ್ದಾಣ ಸ್ವಾಗತಿಸುತ್ತದೆ. ವಿಮಾನದಲ್ಲಿ ಬಂದರೆ ‘ಕೆಂಪೇಗೌಡ’ ಏರ್‌ಪೋರ್ಟ್‌ನಲ್ಲೇ ಇಳಿಯಬೇಕು. ಮೆಜೆಸ್ಟಿಕ್‌ನಲ್ಲಿ ಸುತ್ತಾಡಲು ಹೊರಟವರು ‘ಕೆಂಪೇಗೌಡ’ ರಸ್ತೆಗೆ ಕಾಲಿಡಬೇಕು. ಶಾಪಿಂಗ್‌ ಮಾಡಲು ಹೋದರೆ ಅಲ್ಲೊಂದು ‘ಕೆಂಪೇಗೌಡ’ ಕಾಂಪ್ಲೆಕ್ಸ್‌. ಮೆಟ್ರೋ ಹತ್ತೋಣವೆಂದರೆ ‘ಕೆಂಪೇಗೌಡ’ ಮೆಟ್ರೋ ಸ್ಟೇಷನ್‌. ‘ಕೆಂಪೇಗೌಡ’ ನಗರಗಳು ಇಲ್ಲಿವೆ. ‘ಕೆಂಪೇಗೌಡ’ ಬಡಾವಣೆ ಹೊಸದಾಗಿ ತಲೆ ಎತ್ತಿದೆ. ಹಲವು ವೃತ್ತ, ಸಂಘ, ಸಂಸ್ಥೆಗಳ ಹೆಸರಲ್ಲೂ ‘ಕೆಂಪೇಗೌಡ’ ಅಜರಾಮರ.  ಹಾಗಾದರೆ ಯಾರು ಈ ಕೆಂಪೇಗೌಡ್ರು? ಇವರ ಪ್ರತಿಮೆಯ ವೈಶಿಷ್ಟ್ಯಗಳೇನು? ಇಲ್ಲಿದೆ ಒಂದು ವರದಿ..!