Asianet Suvarna News Asianet Suvarna News

ಮತಾಂತರ ವಿಷಯ ಪ್ರಸ್ತಾಪಿಸಿದ ಗೂಳಿಹಟ್ಟಿ ಶೇಖರ್, ಎಲ್ಲಾ ಚರ್ಚ್‌ಗಳು ಹಾಗಲ್ಲ ಎಂದ ಜಾರ್ಜ್

Sep 21, 2021, 3:22 PM IST

ಬೆಂಗಳೂರು (ಸೆ. 21): ವಿಧಾನಸಭೆಯಲ್ಲಿಂದು ಕವರ್ ಸ್ಟೋರಿ ವರದಿ ಪ್ರಸ್ತಾಪವಾಗಿದೆ. ಸದನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರ ವಿಷಯ ಪ್ರಸ್ತಾಪಿಸಿದರು. ಅವರ ತಾಯಿಯನ್ನು ಮತಾಂತರ ಮಾಡಿರುವ ಬಗ್ಗೆ ಪ್ರಸ್ತಾಪಿಸಿದರು. ಹೊಸದುರ್ಗದಲ್ಲಿ 18-20 ಸಾವಿರ ಜನರ ಮತಾಂತರ ಆಗಿದೆ. ಕ್ರಿಶ್ಚಿಯನ್ ಮಿಷನರಿಗಳು, ಜನರನ್ನು ಬ್ರೇನ್ ವಾಶ್ ಮಾಡುತ್ತಿವೆ' ಎಂದು ಹೇಳಿದರು. ಇದಕ್ಕೆ ಜಾರ್ಜ್ ಪ್ರತಿಕ್ರಿಯಿಸಿ, ಎಲ್ಲಾ ಚರ್ಚ್‌ಗಳ ವಿರುದ್ಧ ಆರೋಪ ಮಾಡಬೇಡಿ. ಮತಾಂತರ ಮಾಡಿದ ಚರ್ಚ್‌ಗಳ ವಿರುದ್ಧ ಕ್ರಮ ಕೈಗೊಳ್ಳಿ' ಎಂದಿದ್ದಾರೆ. 

ವಿಧಾನಸಭೆಯಲ್ಲಿ 'ಕವರ್ ಸ್ಟೋರಿ' ವರದಿ ಪ್ರಸ್ತಾಪಿಸಿ, ಮತಾಂತರದ ಬಗ್ಗೆ ಧ್ವನಿ ಎತ್ತಿದ ಗೂಳಿಹಟ್ಟಿ!