Asianet Suvarna News Asianet Suvarna News

ಮುರುಘಾ ಶ್ರೀಗಳ ವಜಾಗೊಳಿಸಲು ಪಟ್ಟು: ರಾಣಿ ಸತೀಶ್‌ ಆಡಿಯೋ ವೈರಲ್

ಮುರುಘಾ ಮಠದಲ್ಲಿ ಶೀಘ್ರದಲ್ಲೇ ಭಾರೀ ಬೆಳವಣಿಗೆ ನಡೆಯುವ ಸಾಧ್ಯತೆಯಿದ್ದು, ಶಿವಮೂರ್ತಿ ಶ್ರೀಗಳ ವಜಾಗೊಳಿಸಲು ಸಮುದಾಯವು ಸಜ್ಜಾಗುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ.

First Published Oct 19, 2022, 2:32 PM IST | Last Updated Oct 19, 2022, 2:32 PM IST

ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಜತೆ ಮಾಜಿ ಸಚಿವೆ ರಾಣಿ ಸತೀಶ್  ಮಾತನಾಡಿರುವ ಆಡಿಯೋ ಕ್ಲಿಪ್ ವೈರಲ್ ಆಗಿದ್ದು, ಮಠದ ಅಂಗಳದ ಬೆಳವಣಿಗೆಗೆ ಸುಳಿವು ನೀಡುತ್ತಿದೆ. ಮುರುಘಾ ಶ್ರೀ ಪೀಠ ತ್ಯಾಗಕ್ಕೆ ವೀರಶೈವ ಮಹಾಸಭಾ ಒತ್ತಡ ಹೇರಬೇಕು,ಸೈಲೆಂಟ್ ಆಗಿದ್ದರೆ ವೀರಶೈವರಿಂದ ಮುರುಘಾ ಮಠ ಕೈ ತಪ್ಪುವ ಸಾಧ್ಯತೆ ಇದೆ ಎಂದು ಆಡಿಯೋದಲ್ಲಿ ಮಾತನಾಡಲಾಗಿದೆ.ಹೊಸ ಪೀಠಾಧಿಪತಿ ನೇಮಕ ಗೊಂದಲ ಉಂಟು ಮಾಡುತ್ತಿದ್ದು,ಗೊಂದಲಕ್ಕೆ ಆಸ್ಪದ ಕೊಡದಂತೆ ಸರ್ಕಾರ ಮಧ್ಯಪ್ರವೇಶ ಮಾಡಿ ಆಡಳಿತಾಧಿಕಾರಿ ನೇಮಕ ಮಾಡಬೇಕು. ವೀರಶೈವ ಮಹಾಸಭಾದ ದೊಡ್ಡವರು ದನಿ ಎತ್ತುವಂತೆ ಆಡಿಯೋದಲ್ಲಿ ಸಂಭಾಷಣೆ ಮಾಡಲಾಗಿದೆ.

ಅಡಕೆಗೆ ಎಲೆ ಚುಕ್ಕಿರೋಗ, ಜಿಲ್ಲೆಗೂ ತಟ್ಟಿದ ಭೀತಿ!