ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣಗೆ ಸೋಂಕು; ಅಚ್ಚರಿ ಅಂದ್ರೆ ಲಕ್ಷಣವೇ ಇರಲಿಲ್ಲ..!

ಬಿಬಿಎಂಪಿಯ ಬಸವನಗುಡಿ ವಾರ್ಡ್‌ನ ಸದಸ್ಯ ಹಾಗೂ ಮಾಜಿ ಮೇಯರ್‌ ಬಿ.ಎಸ್‌. ಸತ್ಯನಾರಾಯಣ (ಕಟ್ಟೆಸತ್ಯ)ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಬಿಬಿಎಂಪಿಯ ನಾಲ್ಕನೇ ಪಾಲಿಕೆ ಸದಸ್ಯನಿಗೆ ಸೋಂಕು ತಗುಲಿದಂತಾಗಿದೆ.
 

First Published Jul 14, 2020, 12:27 PM IST | Last Updated Jul 14, 2020, 12:27 PM IST

ಬೆಂಗಳೂರು (ಜು. 14): ಬಿಬಿಎಂಪಿಯ ಬಸವನಗುಡಿ ವಾರ್ಡ್‌ನ ಸದಸ್ಯ ಹಾಗೂ ಮಾಜಿ ಮೇಯರ್‌ ಬಿ.ಎಸ್‌. ಸತ್ಯನಾರಾಯಣ (ಕಟ್ಟೆಸತ್ಯ)ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಬಿಬಿಎಂಪಿಯ ನಾಲ್ಕನೇ ಪಾಲಿಕೆ ಸದಸ್ಯನಿಗೆ ಸೋಂಕು ತಗುಲಿದಂತಾಗಿದೆ.

ಕುತೂಹಲಕ್ಕಾಗಿ ಟೆಸ್ಟ್ ಮಾಡಿಸಿದ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣಗೆ ಕೊರೊನಾ ಸೋಂಕು

ದುರಂತವೆಂದರೆ, ಯಾವುದೇ ಸೋಂಕಿನ ಲಕ್ಷಣವಿಲ್ಲದ ಕಟ್ಟೆಸತ್ಯನಾರಾಯಣ ಅವರು ಸೋಮವಾರ ಬಸವಗುಡಿ ವಾರ್ಡ್‌ನಲ್ಲಿ ರಾರ‍ಯಪಿಡ್‌ ಆ್ಯಂಟಿಜನ್‌ ಕೊರೋನಾ ಸೋಂಕು ಪರೀಕ್ಷೆಗೆ (30 ನಿಮಿಷದಲ್ಲಿ ಸೋಂಕು ಪತ್ತೆ ಪರೀಕ್ಷೆ) ಚಾಲನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೇವಲ ಕುತೂಹಲಕ್ಕಾಗಿ ಸತ್ಯನಾರಾಯಣ್‌ ಅವರಿಗೆ ಸೋಂಕು ಪರೀಕ್ಷೆ ನಡೆಸಲಾಗಿದೆ. ದುರಂತ ಸೋಂಕು ದೃಢಪಟ್ಟಿದೆ. ತಕ್ಷಣ ವೈದ್ಯರು ಅವರಿಗೆ ಹೋಂ ಕ್ವಾರಂಟೈನ್‌ ಆಗುವಂತೆ ಸೂಚಿಸಿದ್ದಾರೆ.