ಜಾರಕಿಹೊಳಿ ವಿರುದ್ಧ ರೇಪ್ ಕೇಸ್, ಸಾಹುಕಾರ್ ಮುಂದಿನ ನಡೆಯೇನು..?

ರಾಜ್ಯದ ಜನತೆ ಬೆಂಬಲ ಲಭಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವರ ವಿರುದ್ಧ ವಕೀಲ ಜಗದೀಶ್‌ ಮೂಲಕ ಸೀಡಿ ಲೇಡಿ ದೂರು ದಾಖಲಿಸಿದ್ದಾಳೆ. 

First Published Mar 27, 2021, 3:35 PM IST | Last Updated Mar 27, 2021, 3:35 PM IST

ಬೆಂಗಳೂರು (ಮಾ. 27): ಸಿ.ಡಿ. ಬಹಿರಂಗವಾದ ಬಳಿಕ ಅಜ್ಞಾತ ಸ್ಥಳದಲ್ಲಿರುವ ಯುವತಿ, ಗುರುವಾರ ಎಸ್‌ಐಟಿ ತನಿಖೆ ಬಗ್ಗೆ ವಿಡಿಯೋ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಳು. ಮರುದಿನವೇ ವಿವಾದಕ್ಕೆ ಅನಿರೀಕ್ಷಿತ ತಿರುವು ನೀಡಿದ ಆಕೆ, ರಾಜ್ಯದ ಜನತೆ ಬೆಂಬಲ ಲಭಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವರ ವಿರುದ್ಧ ವಕೀಲ ಜಗದೀಶ್‌ ಮೂಲಕ ದೂರು ದಾಖಲಿಸಿದ್ದಾಳೆ.  

ಮಾಜಿ ಸಚಿವರ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ಸೇರಿದಂತೆ ಇನ್ನಿತರೆ ಆರೋಪಗಳಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ರಮೇಶ್‌ ಜಾರಕಿಹೊಳಿ ಅವರಿಗೆ ಸಂಕಷ್ಟಎದುರಾಗಿದ್ದು, ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ ಎನ್ನಲಾಗುತ್ತಿದೆ.
 

Video Top Stories