ಹಣಕಾಸು ಇಲಾಖೆಗೆ ಆರ್ಥಿಕ ಸಂಕಷ್ಟ; ಮೂರು ತಿಂಗಳಿಂದ ಶಾಸಕರಿಗೆ ಸಂಬಳವೇ ಇಲ್ಲ!
ರಾಜ್ಯದಲ್ಲಿ ಹಣಕಾಸು ಇಲಾಖೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಕಳೆದ ಮೂರು ತಿಂಗಳಿಂದ MLA, MLC ಗಳಿಗೆ ಸಂಬಳವಾಗ್ತಾ ಇಲ್ಲ. ಸಂಬಳ ವಿಳಂಬಕ್ಕೆ ಹಣಕಾಸು ಇಲಾಖೆ ಇನ್ನು ಕಾರಣ ನೀಡಿಲ್ಲ. ವಿಧಾನಸಭೆ, ಪರಿಷತ್ ಸೇರಿ ಒಟ್ಟು 300 ಶಾಸಕರಿಗೆ ವೇತನ ಬರಬೇಕಿದೆ.
ಬೆಂಗಳೂರು (ಜ. 25): ರಾಜ್ಯದಲ್ಲಿ ಹಣಕಾಸು ಇಲಾಖೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಕಳೆದ ಮೂರು ತಿಂಗಳಿಂದ MLA, MLC ಗಳಿಗೆ ಸಂಬಳವಾಗ್ತಾ ಇಲ್ಲ. ಸಂಬಳ ವಿಳಂಬಕ್ಕೆ ಹಣಕಾಸು ಇಲಾಖೆ ಇನ್ನು ಕಾರಣ ನೀಡಿಲ್ಲ. ವಿಧಾನಸಭೆ, ಪರಿಷತ್ ಸೇರಿ ಒಟ್ಟು 300 ಶಾಸಕರಿಗೆ ವೇತನ ಬರಬೇಕಿದೆ.
ಸಂಪುಟ ಸಂಕಟ ತಾರಕಕ್ಕೆ : ಎಲ್ಲರನ್ನೂ ಸೇರಿಸಿಕೊಳ್ಳಲು ಒಲವು
ತಿಂಗಳಿಗೆ 1.5 ಲಕ್ಷ ಸಂಬಳ, ಭತ್ಯೆ ಪಡೆಯುತ್ತಾರೆ MLA ಹಾಗೂ MLC ಗಳು. ಕಳೆದ ಮೂರು ತಿಂಗಳಿಂದ ವೇತನಕ್ಕಾಗಿ ಕಾದು ಕುಳಿತಿದ್ದಾರೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಶ್ರೀ ಕಂಠೇಗೌಡ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ಕೇಳಿ.