Asianet Suvarna News Asianet Suvarna News

ಜ. 26 ರಂದು ರೈತ ಪ್ರತಿಭಟನೆಗೆ ಅನುಮತಿ ಸಿಗುತ್ತಾ? ಆಯುಕ್ತರ ಪ್ರತಿಕ್ರಿಯೆ ಇದು!

ಜ. 26 ರಂದು ನಡೆಸಬೇಕೆಂದುಕೊಂಡಿರುವ ರೈತರ ಪ್ರತಿಭಟನೆಗೆ ಅನುಮತಿ ಕೊಡಬೇಕೋ, ಬೇಡವೋ ಅಂತ ಇಂದು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಹೇಳಿದ್ದಾರೆ. 

Jan 24, 2021, 12:48 PM IST

ಬೆಂಗಳೂರು (ಜ. 24): ಜ. 26 ರಂದು ನಡೆಸಬೇಕೆಂದುಕೊಂಡಿರುವ ರೈತರ ಪ್ರತಿಭಟನೆಗೆ ಅನುಮತಿ ಕೊಡಬೇಕೋ, ಬೇಡವೋ ಅಂತ ಇಂದು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಹೇಳಿದ್ದಾರೆ. 

ಹನುಮಂತ ಗುಲಾಮಗಿರಿಯ ಸಂಕೇತ ಎಂದವರಿಗೆ ಕಟೀಲು ತಿರುಗೇಟು

ಕೆಲವು ರೈತರು ಪ್ರತಿಭಟನೆಗೆ ಅನುಮತಿ ಕೋರಿದ್ದಾರೆ. ಕೋವಿಡ್ ಸೋಂಕು ಭೀತಿ ಇರುವ ಕಾರಣ ಪ್ರತಿಭಟನೆಗೆ ಅನುಮತಿ ಕೊಡಬೇಕೋ, ಬೇಡವೋ ಅಂತ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಆಯುಕ್ತರು ಹೇಳಿದ್ದಾರೆ.