ಮುರುಗೇಶ್ ನಿರಾಣಿ 'ಜೀರೋ ಟು ಹೀರೋ' ಆದ ರೋಚಕ ಕಹಾನಿ

ದೇಶದಲ್ಲಿಯೇ ಸಕ್ಕರೆ ಸಾಮ್ರಾಟನಾಗಿ ಮರೆಯುತ್ತಿರುವ ಮುರುಗೇಶ್‌ ನಿರಾಣಿ| ಯಶಸ್ವಿ ಉದ್ಯಮಿಯಾಗಲು ಸಾಕಷ್ಟು ಕಷ್ಟ ನಷ್ಟಗಳನ್ನ ಎದುರಿಸಿದ ನಿರಾಣಿ| ಯಶಸ್ವಿ ಉದ್ಯಮದ ಜೊತೆಗೂ ರಾಜಕೀಯಕ್ಕೂ ಕೂಡ ಕಾಲಿಟ್ಟು ಅಲ್ಲೂ ಕೂಡ ಯಶಸ್ಸು ಕಂಡ ಮುರುಗೇಶ್‌ ನಿರಾಣಿ|

First Published Jun 13, 2020, 2:52 PM IST | Last Updated Jun 13, 2020, 3:03 PM IST

ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಹಾಗೂ ಮುರುಗೇಶ್‌ ನಿರಾಣಿ ಅವರು ಕೃಷಿ ಕ್ಷೇತ್ರದಿಂದ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟು ಇಂದು ದೇಶದಲ್ಲಿಯೇ ಸಕ್ಕರೆ ಸಾಮ್ರಾಟನಾಗಿ ಮರೆಯುತ್ತಿದ್ದಾರೆ. ಹೀಗೆ ಮುರುಗೇಶ್‌ ನಿರಾಣಿ ಒಂದೇ ಬಾರಿಗೆ ಉದ್ಯಮದಲ್ಲಿ ಯಶಸ್ಸು ಕಂಡವರಲ್ಲ. ಅವರೂ ಕೂಡ ಯಶಸ್ವಿ ಉದ್ಯಮಿಯಾಗಲು ಸಾಕಷ್ಟು ಕಷ್ಟ ನಷ್ಟಗಳನ್ನ ಎದುರಿಸಿದವರಾಗಿದ್ದಾರೆ. 

ಯಶಸ್ವಿ ಉದ್ಯಮದ ಜೊತೆಗೂ ರಾಜಕೀಯಕ್ಕೂ ಕೂಡ ಕಾಲಿಟ್ಟು ಅಲ್ಲೂ ಕೂಡ ಯಶಸ್ಸು ಕಂಡಿವರಾಗಿದ್ದಾರೆ. ಬೀಳಗಿ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಪ್ರಚಂಡ ಬಹುಮತದಿಂದ ಗೆದ್ದ ನಿರಾಣಿಗೆ ಬಿಎಸ್‌ವೈ ಸರ್ಕಾರ ಸಚಿವ ಸ್ಥಾನವನ್ನು ಕೂಡ ನೀಡಿತ್ತು. ಇಂತಹ ಸಾಧಕನ ಬದುಕಿನಲ್ಲಾದ ರೋಚಕ ಘಟನೆಗಳನ್ನ ಸುವರ್ಣ ನ್ಯೂಸ್‌ನ ಹೊಸ ಕಾರ್ಯಕ್ರಮ ಜೀರೋ ಟು ಹೀರೋ ಎಂಬ ಕಾರ್ಯಕ್ರಮದಲ್ಲಿ ಮುರುಗೇಶ್‌ ನಿರಾಣಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. 

Video Top Stories