Asianet Suvarna News Asianet Suvarna News

ಬಹುತೇಕ ರೈತರನ್ನು ತಲುಪದ ಸಾಲಮನ್ನಾ ಹಣ; ಅಧಿಕಾರಿಗಳ ಜೇಬು ಸೇರಿತು ಕಾಂಚಾಣ

ಅದು 2017 ರ ಸಂದರ್ಭ. ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯನವರು 50 ಸಾವಿರದವರೆಗೆ ಸಹಕಾರಿ ಸಂಘಗಳಲ್ಲಿನ ಸಾಲವನ್ನು ಮನ್ನಾ ಮಾಡಿ ಅನ್ನದಾತರಿಗೆ ಬಂಪರ್ ಬಹುಮಾನ ನೀಡಿತ್ತು. ರೈತರು ಸಹ ಸಂಭ್ರಮಪಟ್ಟಿದ್ದರು.

Oct 10, 2020, 5:43 PM IST

ಬೆಂಗಳೂರು (ಅ. 10): ಅದು 2017 ರ ಸಂದರ್ಭ. ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯನವರು 50 ಸಾವಿರದವರೆಗೆ ಸಹಕಾರಿ ಸಂಘಗಳಲ್ಲಿನ ಸಾಲವನ್ನು ಮನ್ನಾ ಮಾಡಿ ಅನ್ನದಾತರಿಗೆ ಬಂಪರ್ ಬಹುಮಾನ ನೀಡಿತ್ತು. ರೈತರು ಸಹ ಸಂಭ್ರಮಪಟ್ಟಿದ್ದರು. ನಮ್ಮ ಸಾಲವೆನ್ನಾ ತೀರಿತು ಎಂದು ನಿಟ್ಟುಸಿರು ಬಿಟ್ಟಿದ್ದರು.

ಸಿದ್ದರಾಮಯ್ಯಗೆ ದೋಖಾ, ಹಳ್ಳ ಹತ್ತಿತು ಸಾಲಮನ್ನಾ ಯೋಜನೆ; ಕೋಟಿ ಕೋಟಿ ಗುಳುಂ

ಆದರೆ ಅದದ್ದೇ ಬೇರೆ. ಸಿದ್ದರಾಮಯ್ಯನವರೇನೋ ಸಾಲ ಮನ್ನಾ ಮಾಡಿದರು. ಆದರೆ ಫಲಾನುಭವಿಗಳಿಗೆ ತಲುಪಿತಾ ಎಂದರೆ ಖಂಡಿತಾ ಇಲ್ಲ. ಸಹಕಾರಿ ಸಂಘದ ಪದಾಧಿಕಾರಿಗಳು, ಅಧಿಕಾರಿಗಳು ಹಣವನ್ನು ಜೇಬಿಗಿಳಿಸಿದ್ದಾರೆ ಎಂಬ ಆಘಾತಕಾರಿ ವಿಚಾರ ಸುವರ್ಣ ನ್ಯೂಸ್ ಕವರ್ ಸ್ಟೋರಿಯಲ್ಲಿ ಬಯಲಾಗಿದೆ. ಲಕ್ಷ ಲಕ್ಷ ಹಣ ಗುಳುಂ ಸ್ವಾಹಾ ಆಗಿದೆ. ಹಗರಣದ ಬಗ್ಗೆ ಡಿಟೇಲ್ಲಾಗಿ ನೋಡೋಣ ಬನ್ನಿ..!