Asianet Suvarna News Asianet Suvarna News

ಇಡಿ ದಾಳಿ ರಾಜಕೀಯ ಪ್ರೇರಿತ, ದ್ವೇಷದ ರಾಜಕಾರಣ: ಜಮೀರ್ ಬೆನ್ನಿಗೆ ನಿಂತ ಡಿಕೆ ಸುರೇಶ್

Aug 5, 2021, 4:55 PM IST

ಬೆಂಗಳೂರು (ಆ. 05): ಜಮೀರ್ ಅಹ್ಮದ್ ಖಾನ್‌ಗೆ ಸಂಬಂಧಿಸಿದ ನಿವಾಸ, ಕಚೇರಿ, ಟ್ರಾವೆಲ್ಸ್‌ಗಳ ಮೇಲೆ ಇಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 'ಇಡಿ ದಾಳಿ ರಾಜಕೀಯ ಪ್ರೇರಿತ. ಈ ಹಿಂದೆ ಜಮೀರ್ ಅವರು ಇಡಿಗೆ ಸಮರ್ಪಕ ಉತ್ತರ ಕೊಟ್ಟಿದ್ದಾರೆ. 2 ವರ್ಷದ ಬಳಿಕ ಮತ್ತೆ ದೆಹಲಿಯಿಂದ ಇಡಿ ಅಧಿಕಾರಿಗಳು ಬಂದು ದಾಳಿ ನಡೆಸುತ್ತಿರುವುದು ಅಚ್ಚರಿ ಮೂಡಿಸಿದೆ' ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಹೇಳಿದ್ಧಾರೆ. 

ಜಮೀರ್ ಅಹ್ಮದ್‌ಗೆ ಇಡಿ ಶಾಕ್, ಆಸ್ತಿಪಾಸ್ತಿ ವಿವರ ನೋಡಿದ್ರೆ, ನೋಡಿದವರೇ ಶಾಕ್..!

ಬೆಂಗಳೂರಿನಲ್ಲಿ ಇಡಿ ಕಚೇರಿ ಇದ್ದರೂ, ರಾಜಕೀಯ ಹಿತಾಸಕ್ತಿಗಾಗಿ ಕೆಲವು ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಿ ಅಲ್ಲಿಂದ ರಾಜಕಾರಣ ಮಾಡುವ ಪರಿಪಾಠ ಬಿಜೆಪಿಯಲ್ಲಿದೆ ಎಂದು ಟೀಕಿಸಿದ್ದಾರೆ.