Asianet Suvarna News Asianet Suvarna News

ಇಡಿ ದಾಳಿ ಮುಕ್ತಾಯದ ಬಳಿಕ ಮಾಧ್ಯಮಗಳಿಗೆ ಜಮೀರ್ ಪ್ರತಿಕ್ರಿಯೆ

Aug 6, 2021, 9:46 AM IST

ಬೆಂಗಳೂರು (ಆ. 06): ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಿವಾಸಕ್ಕೆ ಗುರುವಾರ ಬೆಳಿಗ್ಗೆ 5.45 ರ ಸುಮಾರಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಮೀರ್‌ಗೆ ಸೇರಿದ 6 ಸ್ಥಳಗಳ ಮೇಲೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ಹಣಕಾಸು ವಹಿವಾಟಿನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. 

ಜಮೀರ್ ಮೇಲೆ 'ಆಕ್ರಮಣ': ಇ.ಡಿ ದಾಳಿಯ ಹಿಂದಿನ ಕಾರಣ ಮತ್ತು ರಾಜಕಾರಣ

ಇಡಿ ದಾಳಿ ಮುಕ್ತಾಯದ ಬಳಿಕ ಜಮೀರ್ ಅಹ್ಮದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 'ನನ್ನ ವಿರುದ್ಧ ಮೂರ್ನಾಲ್ಕು ದೂರುಗಳು ಹೋಗಿದ್ದವಂತೆ. ಅದರ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೇನೆ. ಮನೆ ನಿರ್ಮಾಣ, ವೆಚ್ಚದ ಬಗ್ಗೆ ಮಾಹಿತಿ ನೀಡಿದ್ದೇನೆ. ನನ್ನೆಲ್ಲಾ ವ್ಯವಹಾರವನ್ನು ಕಾನೂನು ಬದ್ಧವಾಗಿ ಮಾಡಿದ್ದೇನೆ. ಎಲ್ಲಾ  ದಾಖಲಾತಿಗಳನ್ನು ನೀಡಿದ್ದೇವೆ' ಎಂದಿದ್ದಾರೆ.