ನನ್ನ ತಂದೆ ಸಿಂಹದಂತೆ ಇದ್ರು, ಯಾವಾಗಲೂ ಸಿಂಹದಂತೆ ಇರ್ತಾರೆ: ಕೀರ್ತಿ ವಿಷ್ಣುವರ್ಧನ್
ಇಂದು ವಿಷ್ಣುವರ್ಧನ್‌ರ 11 ನೇ ವರ್ಷದ ಪುಣ್ಯ ತಿಥಿ ಸ್ಮರಣೆ. ಕುಟುಂಬಸ್ಥರು, ಅಭಿಮಾನಿಗಳು ದಾದಾಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದೇ ವೇಳೆ ವಿಷ್ಣುವರ್ಧನ್ ಪುತ್ಥಳಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರಿ ಕೀರ್ತಿ ವಿಷ್ಣುವರ್ಧನ್ ಪ್ರತಿಕ್ರಿಯಿಸಿದ್ಧಾರೆ.
ಬೆಂಗಳೂರು (ಡಿ. 30): ಇಂದು ವಿಷ್ಣುವರ್ಧನ್‌ರ 11 ನೇ ವರ್ಷದ ಪುಣ್ಯ ತಿಥಿ ಸ್ಮರಣೆ. ಕುಟುಂಬಸ್ಥರು, ಅಭಿಮಾನಿಗಳು ದಾದಾಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದೇ ವೇಳೆ ವಿಷ್ಣುವರ್ಧನ್ ಪುತ್ಥಳಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರಿ ಕೀರ್ತಿ ಅನಿರುದ್ಧ ಪ್ರತಿಕ್ರಿಯಿಸಿದ್ಧಾರೆ.
ಗುರು ಪ್ರಸಾದ್ - ಜಗ್ಗೇಶ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ..!
'ನನ್ನ ತಂದೆ ಸಿಂಹದಂತೆ ಇದ್ರು. ಯಾವಾಗಲೂ ಸಿಂಹದಂತೆ ಇರ್ತಾರೆ. ಅವರ ಅಸ್ತಿತ್ವಕ್ಕೆ , ಅವರ ಹೆಸರಿಗೆ ಯಾವತ್ತು ಧಕ್ಕೆ ಬರುವುದಿಲ್ಲ. ತಂದೆಯ ಹೆಸರು ಅವರ ಮೇಲಿನ ಪ್ರೀತಿ ಅಭಿಮಾನಿಗಳ ಮನಸ್ಸಲ್ಲಿ ಇದೆ. ಇನ್ನೊಂದು ವರ್ಷದಲ್ಲಿ ತಂದೆಯ ಸ್ಮಾರಕ ಮೈಸೂರಿನಲ್ಲಿ ನಿರ್ಮಾಣ ಆಗಲಿದೆ. ಒಳ್ಳೆಯ ಕೆಲಸಗಳು ಸ್ವಲ್ಪ ತಡವಾಗಿಯೇ ಆಗೋದು. ಇಂದು ಅವರ ಸ್ಮರಣೆ ಮಾಡುವ ಎಲ್ಲ ಅಭಿಮಾನಿಗಳಿಗೆ ನಮ್ಮ ಧನ್ಯವಾದಗಳು' ಎಂದಿದ್ಧಾರೆ.