ನಿಜವಾಯ್ತು ಸಚಿವ ಸುಧಾಕರ್ ಆತಂಕ; 44 ಕಾರ್ಮಿಕರಿಗೆ ಕೊರೋನಾ ದೃಢ..!

ಇದೀಗ ಸೋಂಕಿತರನ್ನು ವಿಕ್ಟೋರಿಯಾ ಹಾಗೂ ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಎರಡು ದಿನಗಳ ಹಿಂದಷ್ಟೇ ಕಾರ್ಮಿಕರು ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಜಿಲ್ಲಾಡಳಿತ ಗಡಿಯಲ್ಲೇ ಕಾರ್ಮಿಕರನ್ನು ಕ್ವಾರಂಟೈನ್‌ಗೆ ಒಳಪಡಿಸಿತ್ತು.

First Published May 22, 2020, 2:06 PM IST | Last Updated May 22, 2020, 2:18 PM IST

ಬೆಂಗಳೂರು(ಮೇ.22): ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಆತಂಕ ನಿಜವಾಗಿದೆ. ಚಿಕ್ಕಬಳ್ಳಾಪುರಕ್ಕೆ ಮುಂಬೈ ಡೆಡ್ಲಿ ಕೊರೋನಾ ಎಂಟ್ರಿ ಕೊಟ್ಟಿದೆ. ಮುಂಬೈನಿಂದ ಬಂದ 44 ಮಂದಿ ಕಾರ್ಮಿಕರಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ.

ಇದೀಗ ಸೋಂಕಿತರನ್ನು ವಿಕ್ಟೋರಿಯಾ ಹಾಗೂ ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಎರಡು ದಿನಗಳ ಹಿಂದಷ್ಟೇ ಕಾರ್ಮಿಕರು ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಜಿಲ್ಲಾಡಳಿತ ಗಡಿಯಲ್ಲೇ ಕಾರ್ಮಿಕರನ್ನು ಕ್ವಾರಂಟೈನ್‌ಗೆ ಒಳಪಡಿಸಿತ್ತು.

ಕತಾರ್‌ನಿಂದ ಬೆಂಗಳೂರಿಗೆ ಬಂದಿಳಿಯಲಿದ್ದಾರೆ 185 ಕನ್ನಡಿಗರು

ಕಾರ್ಮಿಕರನ್ನು ಮುಂಬೈನಿಂದ ಕರೆತಂದಿದ್ದಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವಿರುದ್ಧ ಸಚಿವ ಸುಧಾಕರ್ ಅಸಮಾಧಾನ ಹೊರಹಾಕಿದ್ದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.