ಮಳಲಿ ಮಸೀದಿ ಜಾಗ ಬಿಟ್ಟು ಕೊಡುತ್ತೇವೆಂದು ಕನಸು ಕಾಣ್ಬೇಡಿ: ಎಸ್‌ಡಿಪಿಐ ಅಧ್ಯಕ್ಷ
ಮಳಲಿ ಮಸೀದಿ ಹಾಗೂ ಮಂದಿರ ವಿವಾದ ಮತ್ತಷ್ಟು ಹೆಚ್ಚಾಗಿದೆ. ಹಿಂದೂ ಸಂಘಟನೆಗಳ ಭಾವನೆಗಳನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ ಎಸ್ ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್. ಮಳಲಿ ಮಸೀದಿ ಹೋಗಲಿ, ಆ ಸ್ಥಳದ ಒಂದು ಹಿಡಿ ಮರಳು ಕೂಡ ಕೊಡೋದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು (ಮೇ. 28): ಮಳಲಿ ಮಸೀದಿ ವಿವಾದದ (Malali Juma Masjid) ಕಿಡಿಗೆ ಎಸ್ ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್ ( President of SDPI Abdul Majeed) ತುಪ್ಪ ಸುರಿದಿದ್ದಾರೆ. ಮಸೀದಿಯಲ್ಲ, ಮಸೀದಿಯ ಜಾಗದ ಒಂದು ಹಿಡಿ ಮರಳು ಕೂಡ ಕೊಡೋದಿಲ್ಲ. ಮಸೀದಿಯ ಜಾಗ ಬಿಟ್ಟುಕೊಡುತ್ತೇವೆ ಅನ್ನೋ ಕನಸು ಕಾಣಬೇಡಿ ಎಂದು ಹೇಳಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ನಡೆದ ಸಮಾವೇಶದಲ್ಲಿ ಎಸ್ ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್ ಈ ಮಾತು ಹೇಳಿದ್ದಾರೆ. 2006ರಲ್ಲಿ ಸಂಡೂರಿನ ಸುಂಕಲ್ಲ ದೇಗುಲವನ್ನು ಒಡೆದು ಹಾಕಲಾಯಿತು. ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ದೇಗುಲನ್ನು ಧ್ವಂಸ ಮಾಡಿದ್ದರು. ತಾಕತ್ತಿದ್ದರೆ ಜನಾರ್ದನ ರೆಡ್ಡಿ ಮನೆಗೆ ಮಾರ್ಚ್ ಮಾಡಲಿ ಎಂದು ಹೇಳಿದ್ದಾರೆ.
ಮಳಲಿ ಮಸೀದಿ ಉತ್ಖನನಕ್ಕೆ ಕೋರ್ಟ್‌ಗೆ ಅರ್ಜಿ?: ಕಾನೂನು ಹೋರಾಟಕ್ಕೆ ಮುಂದಾದ ಜಂಗಮ ಮಠ..!
ಡಿಕೆಶಿ ಈ ವಿಚಾರದಲ್ಲಿ ತಮ್ಮ ಶಾಸಕರಿಗೆ ಮಾತನಾಡದಂತೆ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಮುಸ್ಲೀಮರ ಪರ ಅಲ್ಲ ಅನ್ನೋದನ್ನ ಈಗಲಾದರೂ ತಿಳಿದುಕೊಳ್ಳಿ. ತಾಂಬೂಲ ಪ್ರಶ್ನೆ (Tambula Prashne) ಎಂದು ಬರೋರನ್ನು ಒದ್ದು ಒಳಗೆ ಹಾಕಿ. ಈ ದೇಶ ನಮ್ಮದು, ದೇಶಕ್ಕಾಗಿ ನಾವು ರಕ್ತ ಹರಿಸಿದ್ದೇವೆ. ಅಷ್ಟಮಂಗಲಕ್ಕೆ ಒಂದು ಹಿಡಿ ಮಣ್ಣನ್ನೂ ನೀಡೋದಿಲ್ಲ ಎಂದು ಮಜೀದ್ ಹೇಳಿದ್ದಾರೆ.