ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆಶಿ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್; ಸಿದ್ಧತೆ ಶುರು
ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮೇ. 31 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೆಪಿಸಿಸಿ ಕಛೇರಿಯಲ್ಲಿ ಪದಗ್ರಹಣಕ್ಕೆ ಸಿದ್ಧತೆ ನಡೆಯುತ್ತಿದೆ. ಬೆಂಗಳೂರು ಕಚೇರಿಗೆ ಯಾವ ಕಾರ್ಯಕರ್ತರೂ ಬರುವಂತಿಲ್ಲ. ಹಾರ, ತುರಾಯಿ ಹಾಕುವಂತಿಲ್ಲ. ಆಯಾ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪದಗ್ರಹಣ ಸಮಾರಂಭ ನೋಡುವ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು (ಮೇ. 17): ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮೇ. 31 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೆಪಿಸಿಸಿ ಕಛೇರಿಯಲ್ಲಿ ಪದಗ್ರಹಣಕ್ಕೆ ಸಿದ್ಧತೆ ನಡೆಯುತ್ತಿದೆ. ಬೆಂಗಳೂರು ಕಚೇರಿಗೆ ಯಾವ ಕಾರ್ಯಕರ್ತರೂ ಬರುವಂತಿಲ್ಲ. ಹಾರ, ತುರಾಯಿ ಹಾಕುವಂತಿಲ್ಲ. ಆಯಾ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪದಗ್ರಹಣ ಸಮಾರಂಭ ನೋಡುವ ವ್ಯವಸ್ಥೆ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಮೇ 31ಕ್ಕೆ ಡಿಕೆಶಿ ಪ್ರಮಾಣ
ಮೇ 22 ಅಥವಾ 27 ರಂದು ಸರಳ ಸಮಾರಂಭದ ಮೂಲಕ ಪ್ರಮಾಣ ವಚನ ಸ್ವೀಕರಿಸಬೇಕೆಂದು ನಿರ್ಧರಿಸಲಾಗಿತ್ತು. ಅದರೆ ಡಿಕೆಶಿ ನೊಣವಿನಕೆರೆಯ ಕಾಡು ಸಿದ್ದೇಶ್ವರ ಮಠದ ಅಜ್ಜಯ್ಯರ ಅಶೀರ್ವಾದ ಪಡೆಯಲು ತೆರಳಿದ್ದು, ಅಜ್ಜಯ್ಯರ ಸೂಚನೆಯಂತೆ ಮೇ 31 ರಂದು ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ.
"