SM Krishna Passes Away: ಎಸ್‌ಎಂ ಕೃಷ್ಣ ಕೊಡುಗೆಗಳನ್ನು ಡಿಕೆಶಿ ಸ್ಮರಿಸಿದ್ದು ಹೀಗೆ...!
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಕೊಡುಗೆಗಳನ್ನು ನೆನಪಿಸಿಕೊಂಡಿದ್ದಾರೆ. ಬೆಂಗಳೂರಿಗೆ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆ ತಂದುಕೊಟ್ಟ ಕೃಷ್ಣ, ರೈತರು ಮತ್ತು ಜನರ ಬದುಕಿಗೆ ನೀಡಿದ ಕೊಡುಗೆಗಳು, ಬಿಸಿಯೂಟ ಯೋಜನೆಯನ್ನು ಸ್ಮರಿಸಿದ್ದಾರೆ.
ಬೆಂಗಳೂರು (ಡಿ.10): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಹಾಗೂ ವಿದೇಶಾಂಗ ಕಾರ್ಯದರ್ಶಿ ಎಸ್ ಎಂ ಕೃಷ್ಣ ಅವರ ಕೊಡುಗೆಗಳನ್ನು ನೆನಪಿಸಿಕೊಂಡಿದ್ದಾರೆ.
ಇವರು ಬೆಂಗಳೂರಿಗೆ ಸಿಲಿಕಾನ್ ಸಿಟಿ ಎನ್ನುವ ಗರಿಮೆ ತಂದುಕೊಟ್ಟ ನಾಯಕ ಅವರು. ರಾಜಕಾರಣದ ಎಲ್ಲಾ ಸ್ಥಾನಗಳನ್ನು ಅಲಂಕರಿಸಿ, ಸೋಲು-ಗೆಲುವು ಎಲ್ಲವನ್ನೂ ಕಂಡ ಭವಿಷ್ಯದ ಕನಸುಗಾರ ಎಸ್‌ಎಂ ಕೃಷ್ಣ ಅವರು.
Justice is Due ಎಂದು ಬರೆದು ಸಾವಿಗೆ ಶರಣಾದ ಯುವಕನ 12 ಕೊನೆಯ ಆಸೆ, ಈಡೇರಿಸುತ್ತಾ ನಮ್ಮ ಸಮಾಜ?
ಇಂದು ರೈತರ ಬದುಕಿಗೆ, ಇಲ್ಲಿನ ಜನರ ಬದುಕಿಗೆ ಅವರು ಕೊಟ್ಟಂತ ಕೊಡುಗೆ ಎಲ್ಲರಿಗೂ ನೆನಪಿರುತ್ತದೆ. ಬಿಸಿಯೂಟ, ಹೆಣ್ಣು-ಕುಟುಂಬದ ಕಣ್ಣು ಎನ್ನುವ ಕಾರ್ಯಕ್ರಮವನ್ನೂ ಯಾರೂ ಮರೆಯೋದಿಲ್ಲ ಎಂದಿದ್ದಾರೆ.