Asianet Suvarna News Asianet Suvarna News

DK ಶಿವಕುಮಾರ್ ಪದಗ್ರಹಣ ಮೂರನೇ ಬಾರಿಗೆ ಮುಂದಕ್ಕೆ..!

Jun 10, 2020, 12:02 PM IST

ಬೆಂಗಳೂರು(ಜೂ.10): ಕೆಪಿಸಿಸಿ ಆಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ. ಶಿವಕುಮಾರ್ ಪದಗ್ರಹಣ ಮೂರನೇ ಬಾರಿಗೆ ಮುಂದೂಡಲ್ಪಟ್ಟಿದೆ. ಡಿಕೆಶಿ ಪದಗ್ರಹಣಕ್ಕೆ ಸರ್ಕಾರ ಅನುಮತಿ ನಿರಾಕರಿಸಿದೆ. 

ಇದರಿಂದಾಗಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ, ಇದು ಪ್ರತಿಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಸಾಮಾಜಿಕ ಅಂತರ ಎಲ್ಲಿದೆ ಸಚಿವರೇ? ಅಕ್ಕಪಕ್ಕದಲ್ಲೇ ಕುಳಿತೇ ಬಸ್‌ ಪ್ರಯಾಣ

ಬಿಹಾರ ಬಂಗಾಳದಲ್ಲಿ ಅಮಿತ್ ಶಾ ವರ್ಚುವಲ್ ಸಮಾವೇಶಗಳಿಗೆ ಅನ್ವಯವಾಗದಂತ ನಿಯಮ ಡಿಕೆಶಿಗೆ ಯಾಕೆ? ಏನೇ ಆದರೂ ಕಾರ್ಯಕ್ರಮ ಮಾಡಿಯೇ ಸಿದ್ದ. ಕಾನೂನಿನ ಅಡಿಯಲ್ಲೇ ಕಾರ್ಯಕ್ರಮ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅಬ್ಬರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.