ಕಲ್ಲಂಗಡಿ ಅಂಗಡಿ ಧ್ವಂಸ ಕೇಸ್: ಮಾಲೀಕನ ವಿರುದ್ಧವೇ ಪ್ರತಿದೂರು ದಾಖಲಿಸಿದ ಶ್ರೀರಾಮ ಸೇನೆ
ಧಾರವಾಡದ ಕಲ್ಲಂಗಡಿ ವ್ಯಾಪಾರಿ ಅಂಗಡಿ ( Watermelon Shop Destroy) ಧ್ವಂಸ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಲ್ಲಂಗಡಿ ಅಂಗಡಿ ಮಾಲಿಕ ನಬಿಸಾಬ್ ಮೇಲೆ ಶ್ರೀರಾಮಸೇನೆ (Sriramasene) ದೂರು ದಾಖಲಿಸಿದೆ.
ಬೆಂಗಳೂರು (ಏ. 20): ಧಾರವಾಡದ ಕಲ್ಲಂಗಡಿ ವ್ಯಾಪಾರಿ ಅಂಗಡಿ ( Watermelon Shop Destroy) ಧ್ವಂಸ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಲ್ಲಂಗಡಿ ಅಂಗಡಿ ಮಾಲಿಕ ನಬಿಸಾಬ್ ಮೇಲೆ ಶ್ರೀರಾಮಸೇನೆ (Sriramasene) ದೂರು ದಾಖಲಿಸಿದೆ.
ಏಪ್ರಿಲ್ 09 ರಂದು ನುಗ್ಗಿಕೇರಿ ದೇವಸ್ಥಾನದಲ್ಲಿ ದಾಂಧಲೆ ನಡೆದಿತ್ತು. ದಾಂಧಲೆ ಮಾಡಿದ್ದಾರೆಂದು ನಬೀಸಾಬ್ ದೂರು ನೀಡಿದ್ದರು. ನಬೀಸಾಬ್ ಕೂಡಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಶ್ರೀರಾಮಸೇನೆಯ ಮಹಾನಿಂಗಪ್ಪ ಎಂಬವವರು ದೂರು ದಾಖಲಿಸಿದ್ದಾರೆ.
ಆಜಾನ್ ವಿರುದ್ಧ ಸಮರ: ಮೈಕ್ ತೆರವಿಗೆ ಸರ್ಕಾರಕ್ಕೆ ಡೆಡ್‌ಲೈನ್ ಕೊಟ್ಟ ಶ್ರೀರಾಮಸೇನೆ
'ಕಲ್ಲಂಗಡಿ ಕೇಳಿದ್ದಕ್ಕೆ ಉಗುಳಿ ಹಣ್ಣು ಕೊಡಲು ಮುಂದಾದ. ಯಾಕೆ ಉಗುಳಿದ ಹಣ್ಣು ಕೊಡ್ತೀಯಾ ಎಂದು ಕೇಳಿದೆವು. ಉಗುಳಿದ ಹಣ್ಣು ತಿಂದರೆ ದೆವ್ವ, ಭೂತ ಓಡಿ ಹೋಗುತ್ತವೆ. ನಮ್ಮ ಧರ್ಮದಲ್ಲಿ ಹೀಗೆ ಮಾಡು ಎಂದು ಹೇಳಿದೆ' ಎಂದು ನಬೀಸಾಬ್ ಹೇಳಿದ್ದಾನೆಂದು ದೂರು ದಾಖಲಿಸಿದ್ದಾರೆ.