Asianet Suvarna News Asianet Suvarna News

BIG 3: ಸಂತ್ರಸ್ತರ ಕಣ್ಣೀರಿನ ವರದಿಗೆ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ, ಶೀಘ್ರದಲ್ಲೇ ಪರಿಹಾರ ಭರವಸೆ

2019 ರಲ್ಲಿ ಅತೀವೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಜನ ಮನೆ, ಜಮೀನು ಎಲ್ಲವನ್ನೂ ಕಳೆದುಕೊಂಡಿದ್ದರು. ಅದರಲ್ಲೂ ಧಾರವಾಡದ ಲಕಮಾಪುರ ಗ್ರಾಮದ ಜನ ಇರಲು ಸೂರಿಲ್ಲದೇ, ಪರಿಹಾರ ಪಡೆಯಲು ಬೆಂಗಳೂರಿಗೆ ಹೋಗಲು ಹಣವಿಲ್ಲದೇ ಅಸಹಾಯಕರಾಗಿದ್ದಾರೆ. 
 
ಆಗಿನ ಸಿಎಂ ಆಗಿದ್ದ ಯಡಿಯೂರಪ್ಪನವರು, ನೆರೆ ಸಂತ್ರಸ್ತರಿಗೆ ಪರಿಹಾರ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಮನೆ ಕಟ್ಟಲು ಶುರು ಮಾಡಿದ ಸಂತ್ರಸ್ತರಿಗೆ ಪೂರ್ತಿ ಹಣ ದೊರಕಿಲ್ಲ. ಹೀಗಾಗಿ ಮನೆ ಕಾರ್ಯ ಅರ್ಧಕ್ಕೆ ನಿಂತಿದ್ದು, ಸಂತ್ರಸ್ತರು ಕಂಗಾಲಾಗಿದ್ದಾರೆ. ಮೊದಲ ಕಂತಿನ ಹಣ ಬಂದಿದ್ದು, ಎರಡನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ತಹಶೀಲ್ದಾರ್ ಕಚೇರಿಗೆ ಅಲೆದು ಅಲೆದು ಹೈರಾಣಾಗಿದ್ದಾರೆ. ಅಲ್ಲಿಗೆ ಹೋಗಿ, ಇಲ್ಲಿಗೆ ಹೋಗಿ ಎಂದು ಸತಾಯಿಸುತ್ತಿದ್ದಾರೆ. ಬಿಗ್ 3 ವರದಿ ಬಳಿಕ ಎಚ್ಚೆತ್ತ ಜಿಲ್ಲಾಡಳಿತ, ಗ್ರಾಪಂ ಅಧ್ಯಕ್ಷೆ, ಪಿಡಿಓ ಭೇಟಿ ನೀಡಿ ಮಾಹಿತಿ ಪಡೆದರು.