Asianet Suvarna News Asianet Suvarna News

ಬೆಂಗಳೂರಲ್ಲಿ ಆಂಬುಲೆನ್ಸ್ ಸಿಗದೇ ಕೊರೋನಾ ಸೋಂಕಿತ ಬಲಿ..!

ಕಳೆದ ಮೂರು ದಿನದ ಹಿಂದೆ 42 ವರ್ಷದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿತ್ತು. ನಗರದ ಮಲ್ಯ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಟ್ಟಾಗ ಕೊರೋನಾ ಸೋಂಕು ಇರುವುದು ಪತ್ತೆಯಾಗಿತ್ತು. ಕೋವಿಡ್ ಪಾಸಿಟಿವ್ ಎಂದು ಗೊತ್ತಾದ ಕೂಡಲೇ ವ್ಯಕ್ತಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಬೆಂಗಳೂರು(ಜು.03): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ನಿರ್ವಹಣೆ ಸರಿಯಾಗಿ ಆಗುತಿಲ್ವಾ? ಹೀಗೊಂದು ಅನುಮಾನ ಮತ್ತೆ ಮತ್ತೆ ಶುರುವಾಗಲಾರಂಭಿಸಿದೆ. ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್‌ಗೆ ಕಾದು ಕಾದು ಕಬ್ಬನ್ ಪೇಟೆಯ ವ್ಯಕ್ತಿಯೊಬ್ಬರು ಪ್ರಾಣಬಿಟ್ಟಿದ್ದಾರೆ.

ಹೌದು, ಕಳೆದ ಮೂರು ದಿನದ ಹಿಂದೆ 42 ವರ್ಷದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿತ್ತು. ನಗರದ ಮಲ್ಯ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಟ್ಟಾಗ ಕೊರೋನಾ ಸೋಂಕು ಇರುವುದು ಪತ್ತೆಯಾಗಿತ್ತು. ಕೋವಿಡ್ ಪಾಸಿಟಿವ್ ಎಂದು ಗೊತ್ತಾದ ಕೂಡಲೇ ವ್ಯಕ್ತಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ವೆಂಟಿಲೇಟರ್ ಇಲ್ಲದೇ ಕೊರೋನಾ ವಾರಿಯರ್ಸ್ ಸಾವು..!

ಆಂಬುಲೆನ್ಸ್‌ಗೆ ಕರೆ ಮಾಡಿ ಕಾದು ಕಾದು ಹೈರಾಣಾಗಿ ಹೋಗಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಜೆ ಆರು ಗಂಟೆವರೆಗೂ ಆಂಬುಲೆನ್ಸ್ ಬಂದಿಲ್ಲ. 6 ಗಂಟೆಯ ನಂತರ ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾರ್ಗಮಧ್ಯದಲ್ಲೇ ಸೋಂಕಿತ ಮೃತಪಟ್ಟಿದ್ದಾನೆ. ಈ ಸಾವಿಗೆ ಹೊಣೆ ಯಾರು? ಈ ವ್ಯಕ್ತಿಯನ್ನು ಮೊದಲೇ ಆಸ್ಪತ್ರೆಗೆ ದಾಖಲಿಸಿದ್ದರೆ ಬದುಕುಳಿಯುವ ಸಾಧ್ಯತೆಯಿತ್ತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.