Asianet Suvarna News Asianet Suvarna News
breaking news image

ಗುಲಾಬಿ ಕೊಟ್ಟು ಕರ್ನಾಟಕ ಬಂದ್‌ಗೆ ವಿರೋಧ!

ಕರ್ನಾಟಕ ಬಂದ್‌ ವಿರೋಧಿಸುವಂತೆ ಮನವಿ| ಬಂದ್‌ ವಿರೋಧಿಸುವಂತೆ ಕೋರಿ ಗುಲಾಬಿ ಹಂಚಿದ ಸರ್ವ ಕರ್ನಾಟಕ ಸಂಘಟನೆ ಕಾರ್ಯಕರ್ತರು

ಬೆಂಗಳೂರು[ಫೆ.13]: ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದರೆ, ಇನ್ನು ಕೆಲವು ವಿರೋಧ ವ್ಯಕ್ತಪಡಿಸಿದ್ದವು. ಹೀಗಿರುವಾಗ ಕರ್ನಾಟಕ ಸರ್ವ ಸಂಘಟನೆ ಬಹಳ ವಿಭಿನ್ನವಾಗಿ ಬಂದ್‌ಗೆ ವಿರೋಧ ವ್ಯಕ್ತಪಡಿಸಿವೆ.

ಕರವೇ ಪ್ರವೀಣ್‌ ಶೆಟ್ಟಿಗೆ ಗೃಹಬಂಧನ; ವಾಕಿಂಗ್‌ಗೂ ಕೊಟ್ಟಿಲ್ಲ ಪರ್ಮಿಶನ್

ಬೆಂಗಳೂರಿನ ಕೆ. ಆರ್. ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಹಾಗೂ ಜನರಿಗೆ ಗುಲಾಬಿ ನೀಡಿರುವ ಕಾರ್ಯಕರ್ತರು ಕರ್ನಾಟಕ ಬಂದ್‌ ನಡೆಸದಂತೆ ಮನವಿ ಮಾಡಿಕೊಂಡಿದ್ದಾರೆ. 

ಇಷ್ಟೇ ಅಲ್ಲದೇ ಬೆಂಗಳೂರಿನ ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕರಿಗೂ ಗುಲಾಬಿ ಹೂವು ನೀಡಿ ಈ ಬಂದ್‌ಗೆ ವಿರೋಧ ವ್ಯಕ್ತಪಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ರಸ್ತೆಗಿಳಿಯದ ಶಾಲಾ ವ್ಯಾನ್‌ಗಳು; ಪೋಷಕರಿಗೆ ಕರ್ನಾಟಕ ಬಂದ್ ಬಿಸಿ

Video Top Stories