ದೀಪಾವಳಿ ಹಬ್ಬಕ್ಕೆ 38 'ಸ್ಪೆಷಲ್' ರೈಲುಗಳ ಓಡಾಟ
ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು, ನಾಲ್ಕು ಮಾರ್ಗದಲ್ಲಿ ವಿಶೇಷ ರೈಲುಗಳನ್ನು ಬೇಡಿಕೆಯ ಮೇರೆಗೆ ಓಡಿಸಲು ನಿರ್ಧರಿಸಿದೆ.
ನೈರುತ್ಯ ರೈಲ್ವೆಯಿಂದ ಕರ್ನಾಟಕದ ವಿವಿಧ ಭಾಗಗಳಿಗೆ 30 ವಿಶೇಷ ರೈಲುಗಳನ್ನು ಒಟ್ಟು 117 ಟ್ರಿಪ್ ಸೇವೆಗಳನ್ನು ಕೊಡಲಾಗುತ್ತಿದೆ. ಮುಖ್ಯವಾಗಿ ಯಶವಂತಪುರ-ಮುರ್ಡೇಶ್ವರ,ಯಶವಂತಪುರ-ಬೀದರ್, ಯಶವಂತಪುರ-ಬೆಳಗಾವಿ, ಯಶವಂತಪುರ-ಹುಬ್ಬಳ್ಳಿ ಹಾಗೂ ಅದೇ ರೀತಿ ಶಿವಮೊಗ್ಗ- ಚೆನ್ನೈ, ಹುಬ್ಬಳ್ಳಿ-ವಿಜಾಪುರ, ವಿಜಾಪುರ -ಮಂಗಳೂರು, ಇತ್ಯಾದಿ ನಗರಗಳ ಮಧ್ಯೆ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿರುವುದಾಗಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಾರೆಯಾಗಿ ಇತರ ವಲಯಗಳ ಸಹಯೋಗದೊಂದಿಗೆ 38 ವಿಶೇಷ ರೈಲು ಸೇವೆಗಳು 133 ಟ್ರಿಪ್'ಗಳನ್ನು ಓಡಿಸಲಾಗುತ್ತಿದೆ.