Shivamogga: ವರದಿ ಬಂದ ಬಳಿಕ NIA ಗೆ ಕೊಡುವ ಬಗ್ಗೆ ನಿರ್ಧಾರ: ಸಿಎಂ
ಹರ್ಷ ಹತ್ಯೆ ಪ್ರಕರಣ (Harsha Murder Case) ಸಂಬಂಧ ತನಿಖೆ ನಡೆಯುತ್ತಿದೆ. ವರದಿ ಬಳಿಕ NIA ಗೆ ಕೊಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಶಿವಮೊಗ್ಗ ಶಾಂತಿ ಸುವ್ಯವ್ಯಸ್ಥೆ ಕಾಪಾಡುವುದು ಕೂಡಾ ನಮ್ಮ ಮೊದಲ ಆದ್ಯತೆ' ಎಂದು ಸಿಎಂ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಬೆಂಗಳೂರು (ಫೆ. 23): ಹರ್ಷ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ವರದಿ ಬಳಿಕ NIA ಗೆ ಕೊಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಶಿವಮೊಗ್ಗ ಶಾಂತಿ ಸುವ್ಯವ್ಯಸ್ಥೆ ಕಾಪಾಡುವುದು ಕೂಡಾ ನಮ್ಮ ಮೊದಲ ಆದ್ಯತೆ' ಎಂದು ಸಿಎಂ ಬೆಂಗಳೂರಿನಲ್ಲಿ ಹೇಳಿದ್ದಾರೆ.
Harsha Murder Case: ಎಸ್‌ಪಿ ಲಕ್ಷ್ಮೀ ಪ್ರಸಾದ್ ವರ್ಗಾವಣೆ ಸಾಧ್ಯತೆ
ಇನ್ನೊಂದೆಡೆ ಶಿವಮೊಗ್ಗ ಎಸ್‌ಪಿ ಲಕ್ಷ್ಮೀ ಪ್ರಸಾದ್ (SP Lakshmi Prasad) ವರ್ಗಾವಣೆಯಾಗುವ ಸಾಧ್ಯತೆ ಇದೆ. ಹರ್ಷ ಕೊಲೆ ನಂತರ ಗಲಭೆ ನಿಯಂತ್ರಿಸುವಲ್ಲ ಎಸ್‌ಪಿ ಲಕ್ಷ್ಮೀ ಪ್ರಸಾದ್ ವಿಫಲರಾಗಿದ್ದಾರೆ ಎಂದು ವರ್ಗಾವಣೆಯಾಗುವ ಸಾಧ್ಯತೆ ಇದೆ. ಇಂದೇ ಆದೇಶ ಹೊರ ಬೀಳುವ ಸಾಧ್ಯತೆ ಇದೆ.