ಮಾಸ್ಕ್ ವಿಚಾರಕ್ಕೆ ಮಾಜಿ ಸೈನಿಕನ ಮೇಲೆ ಪೊಲೀಸರಿಂದ ಹಲ್ಲೆ.?

ಮಾಸ್ಕ್ ವಿಚಾರಕ್ಕೆ ಮಾಜಿ ಸೈನಿಕ ಬಿ ಎಸ್ ವೀರಪ್ಪ ಎಂಬುವವರ ಮೇಲೆ ಪೋಲಿಸರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. 

First Published Apr 30, 2021, 5:11 PM IST | Last Updated Apr 30, 2021, 5:11 PM IST

ದಾವಣಗೆರೆ (ಏ. 30): ಮಾಸ್ಕ್ ವಿಚಾರಕ್ಕೆ ಮಾಜಿ ಸೈನಿಕ ಬಿ ಎಸ್ ವೀರಪ್ಪ ಎಂಬುವವರ ಮೇಲೆ ಪೋಲಿಸರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. 

ಮಾಸ್ಕ್ ಹಾಕದೇ ಇದ್ದಿದ್ದಕ್ಕೆ ಮಾಜಿ ಸೈನಿಕರಿಗೆ ದಂಡ ಹಾಕಲಾಯ್ತು. ದಂಡ ಪಾವತಿ ಮಾಡಿದ್ದಕ್ಕೆ ರಸೀದಿ ಕೊಡಿ ಎಂದರೆ ಪೊಲೀಸರು ಒಪ್ಪಲಿಲ್ಲ. ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಾಜಿ ಸೈನಿಕನ ಭುಜ ಹಾಗೂ ಪಾದದ ಮೂಳೆ ಮುರಿದಿದೆ ಎನ್ನಲಾಗಿದೆ. ದೂರು ದಾಖಲಿಸಲು ಪೊಲೀಸ್ ಸ್ಟೇಷನ್‌ಗೆ ಹೋದರೆ ಪೊಲೀಸರು ಕೇಸ್ ರಿಜಿಸ್ಟರ್ ಮಾಡಿಕೊಳ್ಳಲು ಒಪ್ಪಲಿಲ್ಲ ಎನ್ನಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona