News Hour: ಜೈಲೂಟ ತಿಂದರೂ ಬುದ್ಧಿ ಕಲಿಯದ ಡಿಗ್ಯಾಂಗ್, ಸಾಕ್ಷಿಗಳಿಗೆ ಬೆದರಿಕೆ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಮತ್ತೆ 14 ದಿನ ವಿಸ್ತರಣೆಯಾಗಿದೆ. ಇದರ ನಡುವೆ ಸಾಕ್ಷಿಗಳಿಗೆ ಡಿ ಗ್ಯಾಂಗ್‌ನಿಂದ ಬೆದರಿಕೆ ಬರುತ್ತಿರುವ ಆರೋಪ ಬಂದಿದೆ.
 

First Published Aug 2, 2024, 11:50 PM IST | Last Updated Aug 2, 2024, 11:50 PM IST

ಬೆಂಗಳೂರು (ಆ.2): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲೂಟ ಮುಂದುವರಿಸಿರುವ ಡಿ ಗ್ಯಾಂಗ್‌ಗೆ ಇನ್ನೂ ಬುದ್ದಿ  ಬಂದಿಲ್ಲ.ನ್ಯಾಯಾಂಗ ಬಂಧನ ಮತ್ತೆ 14 ದಿನ ವಿಸ್ತರಣೆ ಆಗಿರುವ ನಡುವೆಯೇ, ಸಾಕ್ಷಿಗಳಿಗೆ ಡಿ ಗ್ಯಾಂಗ್‌ನಿಂದ ಬೆದರಿಕೆ ಬರುತ್ತಿರುವ ಆರೋಪ ಬಂದಿದೆ.

ಅದರೊಂದಿಗೆ ಎಲೆಕ್ಟ್ರಿಕ್ ಮೆಗ್ಗರ್​​ನಿಂದಲೇ ರೇಣುಕಾಸ್ವಾಮಿ ಮರ್ಡರ್​ ಮಾಡಿದ್ದಕ್ಕೆ ಸಾಕ್ಷಿಗಳು ಸಿಗಲಾರಂಭಿಸಿವೆ. 699 ರೂ ಕೊಟ್ಟು ಅಮೆಜಾನ್​ನಿಂದ ಮೆಗ್ಗರ್ ಖರೀದಿ ಮಾಡಲಾಗಿತ್ತು. ಇದನ್ನು ಡಿಲೆವರಿ ಮಾಡಿದ್ದ ವ್ಯಕ್ತಿಯನ್ನೂ ಕೂಡ ಪೊಲೀಸರು ಪತ್ತೆ ಮಾಡಿದ್ದಾರೆ.

ಸಿನೆಮಾ ಸ್ಟಾರ್‌ಗಳಿಗೆ ಯೋಗ್ಯತೆ ಮೀರಿ ಬಿಲ್ಡಪ್‌ ಕೊಡ್ತಿದ್ದಾರೆ: ದರ್ಶನ್‌ ಕೇಸ್ ಬಗ್ಗೆ ಅಹಿಂಸಾ ಚೇತನ್ ಹೇಳಿಕೆ

ಅದರೊಂದಿಗೆ ರೇಣುಕಾಸ್ವಾಮಿ ಇನ್ಸ್ಟಾಗ್ರಾಂ, ವಾಟ್ಸಾಪ್ ಖಾತೆ ರಿಟ್ರೀವ್ ಆಗಿದೆ. ಮೆಸೇಜ್ ರಿಟ್ರೀವ್ ಮಾಡಿ ಪೊಲೀಸರಿಂದ ಪರಿಶೀಲನೆ ನಡೆದಿದೆ. ಪವಿತ್ರಾಗೌಡಗೆ ಎಷ್ಟು ದಿನದಿಂದ ರೇಣುಕಾಸ್ವಾಮಿ ಮೆಸೇಜ್ ಮಾಡ್ತಿದ್ದ. ರೇಣುಕಾಸ್ವಾಮಿ ಮೆಸೇಜ್​ಗಳಿಗೆ ಪವಿತ್ರಾಗೌಡ ರಿಪ್ಲೈ ಏನಿರುತ್ತಿತ್ತು..? ಅನ್ನೋದನ್ನ ಪತ್ತೆ ಮಾಡಲು ಶುರು ಮಾಡಿದ್ದಾರೆ.

Video Top Stories