Asianet Suvarna News Asianet Suvarna News

ಹೊಸ ಕೋವಿಡ್‌ ಕೇಸ್‌ಗಳಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು, ಬೆಂಗಳೂರು ನಿಟ್ಟುಸಿರು!

- ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಇಳಿಕೆ, ಗುಣಮುಖರಾದವರ ಸಂಖ್ಯೆ ಏರಿಕೆ

- ಟೆಸ್ಟಿಂಗ್ ಕಡಿಮೆಯಾಗಿದ್ದು, ಸೋಂಕಿನ ವರದಿ ಕಡಿಮೆಯಾಗಲು ಕಾರಣವಾಯ್ತಾ.?

- ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸೋಂಕು ಏರಿಕೆ 

ಬೆಂಗಳೂರು (ಮೇ. 18): ರಾಜ್ಯದಲ್ಲಿ ಎರಡು ತಿಂಗಳ ಬಳಿಕ ಮೊದಲ ಬಾರಿಗೆ ಹೊಸ ಕೋವಿಡ್‌ ಪ್ರಕರಣ ಗಳಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿದ್ದು, ತುಸು ನೆಮ್ಮದಿ ಮೂಡಿಸುವಂತಿದೆ.

ಇದೇ ವೇಳೆ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ಹೊಸ ಪ್ರಕರಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಆಶಾದಾಯಕವಾಗಿದೆ. ಆದರೆ, ರಾಜ್ಯದ ಗ್ರಾಮೀಣ ಭಾಗದಲ್ಲಿ ಪ್ರಕರಣಗಳು ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿ ಮುಂದುವರೆದಿದೆ. ರಾಜ್ಯದ ದಿನದ ಸೋಂಕಿತರ ಪ್ರಮಾಣದಲ್ಲಿ ಬೆಂಗಳೂರಿನ ಪಾಲು ಶೇ.60ರ ಆಸುಪಾಸಿನಿಂದ ಶೇ.26 ಕ್ಕೆ ಕುಸಿದಿದೆ. ಹಾಗಾದರೆ ಬೆಂಗಳೂರು ಕೊರೊನಾ ಯುದ್ಧ ಗೆದ್ದಿತಾ..? ಸೋಂಕು ಕಡಿಮೆಯಾಗಲು ಸಹಾಯಕವಾದದ್ದೇನು..? ಇಲ್ಲಿದೆ ಒಂದು ವರದಿ

Video Top Stories