Asianet Suvarna News Asianet Suvarna News

ಇದೆಂಥಾ ಅವ್ಯವಸ್ಥೆ ರೀ! ಹೆಡ್‌ ಕಾನ್ಸ್‌ಸ್ಟೇಬಲ್‌ಗೂ ಸಿಗಲಿಲ್ಲ ಆ್ಯಂಬುಲೆನ್ಸ್‌!

ಆ್ಯಂಬುಲೆನ್ಸ್‌ ಸಮಸ್ಯೆ ಹೆಚ್ಚಾಗುತ್ತಿದೆ. ಜನಸಾಮಾನ್ಯರು ಮಾತ್ರವಲ್ಲ, ಪೊಲೀಸ್‌ ಪೇದೆಗೂ ಆ್ಯಂಬುಲೆನ್ಸ್‌ ಸಿಗದೇ ಒದ್ದಾಡಿದ್ದಾರೆ. ಸಿಟಿ ಮಾರ್ಕೆಟ್ ಠಾಣೆ ಹೆಡ್‌ ಕಾನ್ಸ್‌ಟೇಬಲ್‌ಗೆ ಕೊರೊನಾ ದೃಢಪಟ್ಟಿದ್ದು, ಆಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್‌ ಸಿಗದೇ ಪರದಾಡಿದ ಘಟನೆ ನಡೆದಿದೆ. 

ಬೆಂಗಳೂರು (ಜೂ. 24): ಆ್ಯಂಬುಲೆನ್ಸ್‌ ಸಮಸ್ಯೆ ಹೆಚ್ಚಾಗುತ್ತಿದೆ. ಜನಸಾಮಾನ್ಯರು ಮಾತ್ರವಲ್ಲ, ಪೊಲೀಸ್‌ ಪೇದೆಗೂ ಆ್ಯಂಬುಲೆನ್ಸ್‌ ಸಿಗದೇ ಒದ್ದಾಡಿದ್ದಾರೆ. ಸಿಟಿ ಮಾರ್ಕೆಟ್ ಠಾಣೆ ಹೆಡ್‌ ಕಾನ್ಸ್‌ಟೇಬಲ್‌ಗೆ ಕೊರೊನಾ ದೃಢಪಟ್ಟಿದ್ದು, ಆಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್‌ ಸಿಗದೇ ಪರದಾಡಿದ ಘಟನೆ ನಡೆದಿದೆ.

ಕೋವಿಡ್ 19 :ಐಸಿಯು ಆಯ್ತು, ವೆಂಟಿಲೇಟರ್‌ ಆಯ್ತು, ಈಗ ಆ್ಯಂಬುಲೆನ್ಸ್‌ ಕೂಡಾ ಸಿಗುತ್ತಿಲ್ಲ.! 

ಮಧ್ಯಾಹ್ನ 12.30 ಕ್ಕೆ ಬಂದು ನಿಂತಿದ್ದ ಸೋಂಕಿತ ಹೆಡ್‌ ಕಾನ್ಸ್‌ಸ್ಟೇಬಲ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ಸಂಜೆ 4.30 ರ ಸುಮಾರಿಗೆ. ಇದೆಂಥಾ ಅವ್ಯವಸ್ಥೆ? ಜನರನ್ನು ಕಾಯುವ ಕೊರೊನಾ ವಾರಿಯರ್‌ಗೆ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲು ಸಾಧ್ಯವಾಗದೇ ಹೋಯ್ತಾ? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Video Top Stories