Cover Story: 'ತ್ಯಾಜ್ಯದಿಂದ ಸಮಸ್ಯೆಯಿಂದ ಮುಕ್ತಿ ಕೊಡಿ, ಇಲ್ಲ ಸಾಮೂಹಿಕವಾಗಿ ಸಾಯಿಸಿ ಬಿಡ್ರಿ'

ದೊಡ್ಡಬಳ್ಳಾಪುರ-ಕೊರಟಗೆರೆ (Doddaballapur Koratagere) ಕ್ಷೇತ್ರದ ಗಡಿರೇಖೆಯ ಮೇಲಿರುವ ಎಂಎಸ್‌ಜಿಪಿ ಇನ್ ಪ್ರಾ ಟೇಕ್ ಘನತ್ಯಾಜ್ಯ ವಿಲೇವಾರಿ ಘಟಕ  ದೊಡ್ಡಬಳ್ಳಾಪುರ, ಕೊರಟಗೆರೆ ಕ್ಷೇತ್ರದ ರೈತರ ಬದುಕಿಗೆ 6 ವರ್ಷದಿಂದ ಮಾರಕ ಆಗಿದೆ. 

 

First Published Dec 18, 2021, 3:11 PM IST | Last Updated Dec 18, 2021, 3:16 PM IST

ಬೆಂಗಳೂರು (ಡಿ. 18): ದೊಡ್ಡಬಳ್ಳಾಪುರ-ಕೊರಟಗೆರೆ (Doddaballapur Koratagere) ಕ್ಷೇತ್ರದ ಗಡಿರೇಖೆಯ ಮೇಲಿರುವ ಎಂಎಸ್‌ಜಿಪಿ ಇನ್ ಪ್ರಾ ಟೇಕ್ ಘನತ್ಯಾಜ್ಯ ವಿಲೇವಾರಿ ಘಟಕ  ದೊಡ್ಡಬಳ್ಳಾಪುರ, ಕೊರಟಗೆರೆ ಕ್ಷೇತ್ರದ ರೈತರ ಬದುಕಿಗೆ 6 ವರ್ಷದಿಂದ ಮಾರಕ ಆಗಿದೆ. ಈ ಘಟಕದಿಂದ ಹೊರ ಬರುವ ಅನಿಲ ಮತ್ತು ಕಸದ ರಾಶಿಯ ಕೊಳಚೆ (Garbage) ನೀರು ಕೊರಟಗೆರೆ ಕ್ಷೇತ್ರದ ಮಾವತ್ತೂರು ಕೆರೆಗೆ ಸೇರಿ ನೀರು (Polluted Water) ಕಲುಷಿತಗೊಂಡಿದೆ.  

Bengaluru Garbage: ಈ ಗ್ರಾಮಗಳ ಯವಕರಿಗೆ ಹೆಣ್ಣು ಕೊಡೋದಿಲ್ವಂತೆ, ಕಂಕಣ ಭಾಗ್ಯ ಕಸಿದ ಕಸ!

ಈ ಬಗ್ಗೆ 'ಕವರ್ ಸ್ಟೋರಿ' (Cover Story) ಕಾರ್ಯಾಚರಣೆಗಿಳಿದಾಗ ಅಲ್ಲಿನ ಜನರು ಒಂದೊಂದೇ ಸಮಸ್ಯೆಯನ್ನು ಹೇಳಿಕೊಂಡರು. ಸುಮಾರು 100 ಗ್ರಾಮದ ಜನರಿಗೆ ಚರ್ಮ ರೋಗ, ಶ್ವಾಸಕೋಶದ ತೊಂದರೆ, ಕಿಡ್ನಿಯಲ್ಲಿ ಕಲ್ಲು ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಂತರ್ಜಲ ಮಟ್ಟ ಕಲುಷಿತವಾಗಿ ಕುಡಿಯಲು ನೀರು ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗ್ರಾಮದ ಯುವಕರಿಗೆ ಯಾರೂ ಹೆಣ್ಣು ಕೊಡುವುದಿಲ್ಲವಂತೆ. ಜನರು ವಾಸನೆ ತಾಳಲಾರದೇ ಪ್ರತಿದಿನ ನರಳುತ್ತಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆಯಿಂದ ಮುಕ್ತಿ ಕೊಡಿ ಸ್ವಾಮಿ ಎನ್ನುತ್ತಿದ್ದಾರೆ.