ಒತ್ತುವರಿ ತೆರವು ನಿಲ್ಲಿಸದಿದ್ದರೆ ಆತ್ಮಹತ್ಯೆ ಬೆದರಿಕೆ: ದಂಪತಿ ಹೈಡ್ರಾಮಾ

ಕೆ.ಆರ್ ಪುರಂ ನ ಗಾಯತ್ರಿ ಲೇ ಔಟ್ ನಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ವಿರೋಧ ವ್ಯಕ್ತವಾಗಿದ್ದು,ದಂಪತಿಗಳು ಪೆಟ್ರೋಲ್ ಹಿಡಿದು ಆತ್ಮಹತ್ಯೆ  ಬೆದರಿಕೆಯನ್ನು ನೀಡುವ ಮೂಲಕ ವಿರೋಧ ವ್ಯಕ್ತ ಪಡಿಸಿದ್ದಾರೆ.
 

First Published Oct 12, 2022, 7:17 PM IST | Last Updated Oct 12, 2022, 7:17 PM IST

ಬೆಂಗಳೂರಿನಲ್ಲಿ ಆಪರೇಷನ್ ರಾಜಕಾಲುವೆ ಚಾಪ್ಟರ್ -2 ಮುಂದುವರೆದಿದ್ದು,ಕೆ.ಆರ್ ಪುರಂ ನ ಗಾಯತ್ರಿ ಲೇ ಔಟ್ ನಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ತೆರವಿಗೆ ಬಂದ ಅಧಿಕಾರಿಗಳಿಗೆ ಮನೆ ಮಾಲೀಕರು  ಬೆದರಿಕೆ  ಒಡ್ಡಿದ್ದು, ಮನೆ ತೆರವು ಮಾಡಿದಲ್ಲಿ ಮೈಮೇಲೆ ಪೆಟ್ರೋಲ್‌ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದರು. ಅದಲ್ಲದೆ  40 ಲಕ್ಷ ಲೋನ್ ಮಾಡಿ ಮನೆಕಟ್ಟಿದ್ದೇವೆ,ಮನೆಯನ್ನು ಯಾವುದೇ ಕಾರಣಕ್ಕೂ ಒಡೆಯಕ್ಕೆ ಬಿಡಲ್ಲ ಎಂದು  ದಂಪತಿ ಪಟ್ಟು ಹಿಡಿದಿದ್ದರು. ಅಲ್ಲದೆ ಸ್ಥಳಕ್ಕೆ ಸಿಎಂ ಬರಬೇಕು ಎಂದು ಒತ್ತಾಯಿಸಿದರು.ಇನ್ನು ಅಧಿಕಾರಿಗಳ ಮತ್ತು ಪೊಲೀಸರ ಮುಂದೆ ಪೆಟ್ರೋಲ್ ಸುರಿದುಕೊಂಡು ಸುಸೈಡ್ ‌ಮಾಡಿಕೊಳ್ಳಲು ಯತ್ನಿಸಿದ್ದು, ನಂತರ ಅಧಿಕಾರಿಗಳು ತಕ್ಷಣ ಅಲರ್ಟ್ ಆಗಿ ದಂಪತಿಯ ಮೇಲೆ ನೀರು ಹಾಕಿ ರಕ್ಷಣೆ ಮಾಡಿದರು.