ಮಾಣಿಪ್ಪಾಡಿ ಹಳೆ ವಿಡಿಯೋ ರಿಲೀಸ್ ಮಾಡಿದ ಕೈ ಪಡೆ! ಕೇಸರಿ ಕಲಿಗಳಿಗೆ ಅಸ್ತ್ರವಾದ ಮಾಣಿಪ್ಪಾಡಿ ಹೊಸ ಹೇಳಿಕೆ!
ಕಾಂಗ್ರೆಸ್ ಬಿಡುಗಡೆ ಮಾಡಿರೋ ಹಳೆ ವಿಡಿಯೋದಲ್ಲಿ ಬಿ.ವೈ.ವಿಜಯೇಂದ್ರ ಸುಮ್ಮನಿರುವಂತೆ ಆಮಿಷವೊಡ್ಡಿದ್ರು ಅಂತ ಮಾಣಿಪ್ಪಾಡಿ ಹೇಳಿದ್ದಾರೆ. ಈಗ ಅವರು ಕೊಡ್ತಿರೋ ಸ್ಟೇಟ್ಮೆಂಟ್ನಲ್ಲಿ ಹಾಗೇನು ಇಲ್ಲ
ವಕ್ಫ್ ಭೂಮಿ. 150 ಕೋಟಿ ಬಾಂಬ್. ಹಳೆ ವಿಡಿಯೋ. ಹೊಸ ಕಿಚ್ಚು. ಸತ್ಯ. ಮಿಥ್ಯ. ಸದನ. ಕದನ. ಜಂಗೀಕುಸ್ತಿ. ಮಾಣಿಪ್ಪಾಡಿ ಮತ್ತೊಂದು ವಿಡಿಯೋ. ಶುರು ಮಹಾಯುದ್ಧ. ‘ಕೈ’ನಿಂದ ಕಮಲಕ್ಕೆ ಚಿಮ್ಮಿದ ಬಾಣ ಕಾಂಗ್ರೆಸ್‌ಗೆ ಚುಚ್ಚಿತಾ? ಸದನದಲ್ಲಿ ಖರ್ಗೆ ಸಿಡಿಸಿದ 150 ಕೋಟಿ ಬಾಂಬ್‌ಗೆ ಸದನದಲ್ಲಿಯೇ ಗುಡುಗಿದ ವಿಜಯೇಂದ್ರ. ಆಮಿಷದ ತನಿಖೆಯಾಗಿಲಿ.
ಸಿಎಂಗೆ ಸವಾಲು ಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ. ಬೆದರಿಕೆ ಹಾಕಿದ್ರಾ? ಬ್ಲಾಕ್ ಮೇಲ್ ಮಾಡಿದ್ರಾ? ಏನಿದು ಕಾಂಗ್ರೆಸ್ ನಾಯಕರ ಆರೋಪ? ಹಳೇ ಹೇಳಿಕೆ. ಹೊಸ ಸ್ಟೇಟ್ಮೆಂಟ್. ಎದ್ದು ಕೂತ ಗೊಂದಲ. ಆ ಗೊಂದಲಕ್ಕೆ ತೆರೆ ಎಳೆಯಲು ಮಾಣಿಪ್ಪಾಡಿ ಮಾಡಿದ ಪ್ರಯತ್ನ ಏನು? ಇದೇ ಇವತ್ತಿನ ಸುವರ್ಣ ಸ್ಪೆಷಲ್ ವಕ್ಫ್ ಮತ್ತು 150 ಕೋಟಿ ರಹಸ್ಯ!