Asianet Suvarna News Asianet Suvarna News

ನಾನು ಆರ್‌ಎಸ್‌ಎಸ್ ಸ್ವಯಂಸೇವಕ, ಕೋತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ: ಸಿ ಟಿ ರವಿ

Aug 14, 2021, 4:04 PM IST

ಬೆಂಗಳೂರು (ಆ. 14): ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾಯಿಸಬೇಕು ಎಂಬ ಬಿಜೆಪಿ ನಾಯಕರ ವರಸೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. 'ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಹುಕ್ಕಾಬಾರ್ ತೆರೆಯಲಿ' ಎಂದು ಸಿ ಟಿ ರವಿ ಹೇಳಿಕೆಗೆ ಕಾಂಗ್ರೆಸ್ಸಿಗರು ಮುಗಿ ಬಿದ್ದಿದ್ದಾರೆ.

'ಸಿ.ಟಿ ರವಿ ಹುಚ್ಚು ನಾಯಿ ಕಡಿದಂತೆ ಮಾತನಾಡುತ್ತಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಿ ಎಂದು ದಿನೇಶ್ ಗುಂಡೂರಾವ್ ಹೇಳಿದರೆ, ಬಿಜೆಪಿಯವರು ಸಿ.ಡಿ ಪ್ರೊಡಕ್ಷನ್ ಹೌಸ್ ತೆರೆಯಲಿ ಎಂದು ರಕ್ಷಾ ರಾಮಯ್ಯ ಟಾಂಗ್ ನೀಡಿದ್ಧಾರೆ. 'ನಾನು ಆರ್‌ಎಸ್‌ಎಸ್ ಸ್ವಯಂಸೇವಕ. ಕೋತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ ಎಂದು ಡಿಕೆಶಿಗೆ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್- ಬಿಜೆಪಿ ನಾಯಕರ ಹೇಳಿಕೆ, ಪ್ರತಿ ಹೇಳಿಕೆಗಳ ಸಂಪೂರ್ಣ ವರದಿ ಇಲ್ಲಿದೆ.