BIG 3 Impact: ಮೈಸೂರು ವಿವಿ ಲೇಡಿಸ್‌ ಹಾಸ್ಟೆಲ್‌ಗೆ ಅಧಿಕಾರಿಗಳ ಭೇಟಿ, ಪರಿಹಾರಕ್ಕೆ 1 ವಾರ ಗಡುವು

ಮೈಸೂರು (Mysuru ) ಗಂಗೋತ್ರಿ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿರುವ ಮಹಿಳಾ ಹಾಸ್ಟೆಲ್ (Ladies Hostel) ದುಸ್ಥಿತಿಯಲ್ಲಿದೆ. ಮಳೆ ಬಂದಾಗ ಸಂಪೂರ್ಣ ಸೋರುತ್ತದೆ. ವಿದ್ಯಾರ್ಥಿನಿಯರ ರೂಂಗಳು ಕೆರೆಯಂತಾಗುತ್ತದೆ. 

First Published May 16, 2022, 1:47 PM IST | Last Updated May 16, 2022, 1:51 PM IST

ಮೈಸೂರು (ಮೇ.16): ಗಂಗೋತ್ರಿ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿರುವ ಮಹಿಳಾ ಹಾಸ್ಟೆಲ್ ದುಸ್ಥಿತಿಯಲ್ಲಿದೆ. ಮಳೆ ಬಂದಾಗ ಸಂಪೂರ್ಣ ಸೋರುತ್ತದೆ. ವಿದ್ಯಾರ್ಥಿನಿಯರ ರೂಂಗಳು ಕೆರೆಯಂತಾಗುತ್ತದೆ. ಸೀಲಿಂಗ್, ಗೋಡೆಗಳ ಮೇಲೆ ಸದಾ ನೀರು ಜಿನುಗಿ ಯಾವಾಗ ಕಟ್ಟಡ ನಮ್ಮ ಮೈಮೇಲೆ ಬೀಳುತ್ತೋ ಎಂಬ ಭಯದಲ್ಲಿದ್ದಾರೆ ವಿದ್ಯಾರ್ಥಿನಿಯರು.

ಸೋರುತಿದೆ ಮೈಸೂರು ವಿವಿ ಮಹಿಳಾ ಹಾಸ್ಟೆಲ್, ರೂಂ ಒಳಗೆ ಸ್ವಿಮ್ಮಿಂಗ್ ಪೂಲ್, ಸ್ವಿಚ್ ಮುಟ್ಟಿದ್ರೆ ಶಾಕ್..!

ಈ ಸಮಸ್ಯೆ ಬಗ್ಗೆ ಉಪಕುಲಪತಿಗಳ ಗಮನಕ್ಕೆ ತಂದರೆ, ತಾತ್ಕಾಲಿಕವಾಗಿ ಏನೋ ಮಾಡಿ ಹೋಗ್ತಾರೆ. ಜೋರು ಮಳೆ ಬಂದರೆ ಮತ್ತದೇ ಕತೆ.  ಈ ಬಗ್ಗೆ ಮೇಲ್ವಿಚಾರಕ ಗುರು ಸಿದ್ದಯ್ಯರನ್ನು ಪ್ರಶ್ನಿಸಿದಾಗ, ಹಾರಿಕೆಯ ಉತ್ತರ ಕೊಟ್ಟು ತಪ್ಪಿಸಿಕೊಳ್ಳಲೆತ್ನಿಸಿದರು. ನಂತರ ಹಾಸ್ಟೆಲ್‌ಗೆ ಕುಲಸಚಿವರು ಭೇಟಿ ನೀಡಿ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ಒಂದು ವಾರದಲ್ಲಿ ಸಮಸ್ಯೆಗೆ ಮುಕ್ತಿ ಕೊಡುವುದಾಗಿ ಭರವಸೆ ನೀಡಿದರು.