'ಹಸಿರು ಟವೆಲ್ ಮಾರಾಟಕ್ಕಿಟ್ಟು ಕೋಡಿಹಳ್ಳಿ ವಸೂಲಿ ದಂಧೆ ಮಾಡ್ತಿದ್ದಾರೆ'

ಕೋಡಿಹಳ್ಳಿ ಚಂದ್ರಶೇಖರ್‌ ರೈತ ನಾಯಕನೆಂದು ಹೇಳಿಕೊಂಡು, ಹಸಿರು ಟವೆಲ್‌ ಹಾಕಿಕೊಂಡು ಅದನ್ನು ಮಾರಾಟಕ್ಕಿಟ್ಟು, ಅದಕ್ಕೆ ಅವಮಾನ ಮಾಡಿ ವಸೂಲಿ ದಂಧೆಗೆ ಇಳಿದಿದ್ದಾರೆ ಎಂದು ಬಿಜೆಪಿ ರೈತ ಮುಖಂಡ ಮಲ್ಲೇಶ್‌ ಆರೋಪಿಸಿದ್ದಾರೆ. 

First Published Dec 16, 2020, 10:26 AM IST | Last Updated Dec 16, 2020, 11:41 AM IST

ಬೆಂಗಳೂರು (ಡಿ. 16): ಕೋಡಿಹಳ್ಳಿ ಚಂದ್ರಶೇಖರ್‌ ರೈತ ನಾಯಕನೆಂದು ಹೇಳಿಕೊಂಡು, ಹಸಿರು ಟವೆಲ್‌ ಹಾಕಿಕೊಂಡು ಅದನ್ನು ಮಾರಾಟಕ್ಕಿಟ್ಟು, ಅದಕ್ಕೆ ಅವಮಾನ ಮಾಡಿ ವಸೂಲಿ ದಂಧೆಗೆ ಇಳಿದಿದ್ದಾರೆ ಎಂದು ಬಿಜೆಪಿ ರೈತ ಮುಖಂಡ ಮಲ್ಲೇಶ್‌ ಆರೋಪಿಸಿದರು.

ಪರಿಷತ್ ಬಿಕ್ಕಟ್ಟು ರಾಜಭವನದ ಅಂಗಳಕ್ಕೆ; ಕುತೂಹಲ ಮೂಡಿಸಿದೆ ರಾಜ್ಯಪಾಲರ ನಡೆ

ಈತ 2008 ಮತ್ತು 2013ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿದಾಗ ಘೋಷಿಸಿಕೊಂಡ ಆಸ್ತಿ 2 ಎಕರೆ 5 ಗುಂಟೆ ಜಮೀನು. ಪ್ರಸ್ತುತ ಈತ ಬೆಂಗಳೂರಿನಲ್ಲಿ ಐಷಾರಾಮಿ ಮನೆ, ಐಷಾರಾಮಿ ಕಾರು ಹೊಂದಿದ್ದಾನೆ. ಪತ್ನಿ ಹಾಗೂ ಮಕ್ಕಳು ಸಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಐಷಾರಾಮಿ ಜೀವನ ನಡೆಸುತ್ತ ಅಪಾರ ಆಸ್ತಿಗಳಿಸಿರುವ ಇವರು ಯಾವ ರೀತಿ ಸಂಪಾದನೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಅಧಿಕಾರಿಗಳಿಗೆ ಇವರ ವಿರುದ್ಧ ದೂರು ನೀಡಲಾಗುವುದು ಎಂದಿದ್ದಾರೆ. 

 

 

ಇಂದು ಮತ್ತೆರಡು ಪ್ರತಿಭಟನೆಗೆ ಕರ್ನಾಟಕ ಸಾಕ್ಷಿ; ಬೇಡಿಕೆ ಈಡೇರದಿದ್ರೆ ಉಗ್ರ ಹೋರಾಟದ ಎಚ್ಚರಿಕೆ