ಮುಂದುವರೆದ ನೌಕರರ ಹೋರಾಟ, ರಸ್ತೆಗಿಳಿದಿಲ್ಲ ಬಸ್‌ಗಳು, ಪ್ರಯಾಣಿಕರಿಗೆ ತಪ್ಪಿಲ್ಲ ಪರದಾಟ
ಸಾರಿಗೆ ನೌಕರರ ಪ್ರತಿಭಟನೆ 5 ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಗೆ ಸರ್ಕಾರ ಬಗ್ಗುತ್ತಿಲ್ಲ, ನೌಕರರು ಹಠ ಬಿಡುತ್ತಿಲ್ಲ ಎನ್ನುವಂತಾಗಿದೆ. ಸರ್ಕಾರ ಹಾಗೂ ಸಾರಿಗೆ ನೌಕರರ ಸಂಧಾನ ವಿಫಲವಾಗಿದೆ. ಇಂದೂ ಕೂಡಾ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ನೌಕರರ ಮುಷ್ಕರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಬೆಂಗಳೂರು (ಡಿ. 14): ಸಾರಿಗೆ ನೌಕರರ ಪ್ರತಿಭಟನೆ 5 ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಗೆ ಸರ್ಕಾರ ಬಗ್ಗುತ್ತಿಲ್ಲ, ನೌಕರರು ಹಠ ಬಿಡುತ್ತಿಲ್ಲ ಎನ್ನುವಂತಾಗಿದೆ. ಸರ್ಕಾರ ಹಾಗೂ ಸಾರಿಗೆ ನೌಕರರ ಸಂಧಾನ ವಿಫಲವಾಗಿದೆ. ಇಂದೂ ಕೂಡಾ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ನೌಕರರ ಮುಷ್ಕರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಸರ್ಕಾರದ ಮಾತಿಗೆ ಒಪ್ಪಿದ್ದ ನೌಕರರು ಯೂ ಟರ್ನ್ ; ಇಂದೂ ರಸ್ತೆಗಿಳಿಯಲ್ಲ ಬಸ್‌ಗಳು
ಇವತ್ತು ಬಸ್‌ಗಳು ಇರಬಹುದು ಎಂದು ಪ್ರಯಾಣಿಕರು ಬಸ್ ಸ್ಟ್ಯಾಂಡ್‌ಗೆ ಬಂದಿದ್ದಾರೆ. ಆದರೆ ಬಸ್‌ಗಳು ರಸ್ತೆಗಿಳಿಯದೇ ಇದ್ದಿದ್ದರಿಂದ ಪರದಾಡುವಂತಾಗಿದೆ. ಬೆಂಗಳೂರಿನ ಪ್ರಮುಖ ನಿಲ್ದಾಣಗಳಾದ ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಸ್ಯಾಟಲೈಟ್ ಬಸ್ ಸ್ಟ್ಯಾಂಡ್‌ಗಳಲ್ಲಿ ಯಾವ ರೀತಿ ಇದೆ ಚಿತ್ರಣ? ಪ್ರಯಾಣಿಕರು ಏನ್ ಹೇಳ್ತಿದ್ದಾರೆ? ನೋಡೋಣ ಬನ್ನಿ..!