Asianet Suvarna News

ಕರ್ನಾಟಕ ಸಿಎಂ ಕುರ್ಚಿ ಚೇಂಜ್, ಹೈಕಮಾಂಡ್ ಲೆಕ್ಕಾಚಾರ ಏನು..?

Jun 16, 2021, 11:13 AM IST

ಬೆಂಗಳೂರು (ಜೂ. 16): ನಾಯಕತ್ವ ಬದಲಾವಣೆ ವಿಚಾರ, ಪಕ್ಷದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. 

ಸಿಎಂ ಬಿಎಸ್‌ವೈ ಕುರ್ಚಿ ಭದ್ರವಾಗಿರೋದರ ಹಿಂದಿನ ಶಕ್ತಿ ಇವರೇನಾ..?

ಸಿಪಿ ಯೋಗೇಶ್ವರ್ ಅಚ್ಚರಿ ಹೇಳಿಕೆ, ಶಾಸಕ ಅರವಿಂದ್ ಬೆಲ್ಲದ್ ದೆಹಲಿ ಭೇಟಿ ನಾಯಕತ್ವ ಬದಲಾವಣೆಗೆ ವಿಚಾರಕ್ಕೆ ಇನ್ನಷ್ಟು ಪುಷ್ಠಿ ನೀಡಿದ್ದವು. ಇದೀಗ ಅರುಣ್ ಸಿಂಗ್, ಶಾಸಕರ ಜೊತೆ ಸಭೆ ಬಳಿಕ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ವರದಿ ನೀಡಲಿದ್ದಾರೆ.  ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.