Asianet Suvarna News Asianet Suvarna News

School Reopen: ಇಂದು ಮಹತ್ವದ ಕೋವಿಡ್‌ ಸಭೆ, ಬೆಂಗಳೂರಿನಲ್ಲಿ 1-9ನೇ ತರಗತಿ ಆರಂಭ ಸಾಧ್ಯತೆ

ರಾಜ್ಯದಲ್ಲಿ ಕೊರೋನಾ ಸೋಂಕಿನ (CoronaVirus) ಪ್ರಕರಣಗಳು ಹೆಚ್ಚಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಇಳಿಕೆಯಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲೂ (Bengaluru) ಶಾಲಾ ತರಗತಿ ಆರಂಭಿಸುವುದು ಸೇರಿದಂತೆ ಕೆಲ ಕಠಿಣ ನಿರ್ಬಂಧಗಳನ್ನು ಸಡಿಲಿಕೆ ಮಾಡುವ ಕುರಿತು ನಿರ್ಧರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ.

 

ಬೆಂಗಳೂರು (ಜ. 29): ರಾಜ್ಯದಲ್ಲಿ ಕೊರೋನಾ ಸೋಂಕಿನ (CoronaVirus) ಪ್ರಕರಣಗಳು ಹೆಚ್ಚಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಇಳಿಕೆಯಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲೂ (Bengaluru) ಶಾಲಾ ತರಗತಿ ಆರಂಭಿಸುವುದು ಸೇರಿದಂತೆ ಕೆಲ ಕಠಿಣ ನಿರ್ಬಂಧಗಳನ್ನು ಸಡಿಲಿಕೆ ಮಾಡುವ ಕುರಿತು ನಿರ್ಧರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ.

News Hour: ಬಿಎಸ್‌ವೈ ಮೊಮ್ಮಗಳ ಸುಸೈಡ್‌ಗೆ ಕಾರಣ? ಕರ್ನಾಟಕದಲ್ಲಿ ಬಿಸಿಯೇರಿದ ರಾಜಕಾರಣ

ಬೆಂಗಳೂರಿನಲ್ಲಿ 1ರಿಂದ 9ನೇ ತರಗತಿವರೆಗಿನ ಶಾಲೆಗಳನ್ನೂ ಪುನರ್‌ ಪ್ರಾರಂಭಿಸಬೇಕು. ಆಯಾ ಶಾಲೆಯಲ್ಲಿ ಸೋಂಕು ಕಾಣಿಸಿಕೊಂಡರೆ ಶಾಲೆಯನ್ನು ಮಾತ್ರ ಒಂದು ಘಟಕವನ್ನಾಗಿ ಪರಿಗಣಿಸಿ 4ರಿಂದ 7 ದಿನಗಳವರೆಗೆ ತಾತ್ಕಾಲಿಕವಾಗಿ ಬಂದ್‌ ಮಾಡಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ಅಲ್ಲದೆ ಹೋಟೆಲ್‌, ಚಲನಚಿತ್ರ ಮಂದಿರ, ಬಾರ್‌, ರೆಸ್ಟೋರೆಂಟ್‌ಗಳಿಗೆ ವಿಧಿಸಿರುವ ಶೇ.50ರಷ್ಟುಸೀಟು ಮಿತಿಯನ್ನು ಸಡಿಲಗೊಳಿಸಲು ಸಹ ಸಲಹೆ ನೀಡಿದೆ ಎಂದು ತಿಳಿದುಬಂದಿದೆ. ಹೀಗಾಗಿ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.

 

Video Top Stories