Asianet Suvarna News Asianet Suvarna News

ಅಪ್ಪುಗೆ ಮರಣೋತ್ತರ 'ಕರ್ನಾಟಕ ರತ್ನ', ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು ವೇದಿಕೆ

ಅರಮನೆ ಮೈದಾನದಲ್ಲಿ ನಡೆದ 'ಪುನೀತ ನಮನ' ಕಾರ್ಯಕ್ರಮದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
 

ಬೆಂಗಳೂರು (ನ. 17): ಅರಮನೆ ಮೈದಾನದಲ್ಲಿ ನಡೆದ 'ಪುನೀತ ನಮನ' (Puneetha Namana) ಕಾರ್ಯಕ್ರಮದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ಕರ್ನಾಟಕ ರತ್ನ (Karnataka Rathna)  ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಹುಟ್ಟಿದ 6 ತಿಂಗಳಿಗೆ ತೆರೆಗೆ, 27 ಚಿತ್ರಗಳು, ಸಾಮಾಜಿಕ ಕೆಲಸಗಳು, ಯಾವತ್ತೂ ಚಿರಸ್ಥಾಯಿ ಅಪ್ಪು!

ಪುನೀತ್‌ ನಮನ ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಕುರಿತ ಸಾಕ್ಷ್ಯಚಿತ್ರ ಪ್ರಸಾರ ಮಾಡಲಾಯಿತು. ಕಿಚ್ಚ ಸುದೀಪ್‌ (Kiccha Sudeep) ಧ್ವನಿಯಲ್ಲಿ ಮೂಡಿಬಂದ 5 ನಿಮಿಷಗಳ ಅವಧಿಯ ಈ ಸಾಕ್ಷ್ಯಚಿತ್ರವನ್ನು ನೋಡುತ್ತಾ ಶಿವರಾಜ್‌ಕುಮಾರ್‌, ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಕಣ್ಣೀರು ಹಾಕಿದರು. ಪುನೀತ್‌ ದ್ವಿತೀಯ ಪುತ್ರಿ ವಂದಿತಾ ಅಮ್ಮನ ಹೆಗಲಿಗೆ ಒರಗಿ ಅಳುತ್ತಿದ್ದ ದೃಶ್ಯವನ್ನು ನೋಡಿದವರೆಲ್ಲಾ ಮರುಗಿದ ಸನ್ನಿವೇಶ ನಡೆಯಿತು.
ಇನ್ನು  ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಸಹೋದರರು ಭಾವುಕವಾಗಿ ಕಾಣಿಸಿಕೊಂಡರು. ಭಾಷಣದ ವೇಳೆಯಲ್ಲಿ ತಡೆಯಲಾಗದೆ ಕಣ್ಣೀರು ಹಾಕಿದ ಸಹೋದರರು, ತಮ್ಮನಿಗೆ ಕಣ್ಣೀರಿನ ವಿದಾಯ ಕೋರಿದರು. ಜೊತೆ ನಿಂತವರಿಗೆ ಧನ್ಯವಾದ ಸಲ್ಲಿಸಿದರು.

 

Video Top Stories