Asianet Suvarna News Asianet Suvarna News

ಮಲ್ಲೇಶ್ವರಂ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟ ಸಿಎಂ

Aug 23, 2021, 12:32 PM IST

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಮಲ್ಲೇಶ್ವರಂ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದಾರೆ. 9ನೇ ತರಗತಿಯಿಂದ ಶಾಲೆ ಪುನರಾರಂಭಗೊಂಡಿದ್ದು ಸಿಎಂ ಮೊದಲ ದಿನ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದಾರೆ. ಮೊದಲ ದಿನ ಗಿಡ ನೆಟ್ಟು ನೀರೆರೆದು ಮೊದಲ ಶಾಲಾ ಪುನರಾರಂಭಕ್ಕೆ ಚಾಲನೆ ಕೊಟ್ಟಿದ್ದಾರೆ.

ಶಾಲೆ ಪುನರಾರಂಭ: ಸ್ಕೂಲ್‌ ಆರಂಭಿಸಿದ್ದಕ್ಕೆ ಥ್ಯಾಂಕ್ಸ್‌ ಎಂದ ವಿದ್ಯಾರ್ಥಿನಿ..!

ಕೊರೋನಾ ಮಧ್ಯೆ ಶಾಲೆ ಕಾಲೇಜು ಆರಂಭಿಸಿದ್ದು ಲಾಕ್‌ಡೌನ್ ನಂತರ ಮತ್ತೆ ಶಾಲೆಯ ಬಾಗಿಲು ತೆರೆದಿರುವುದು ಸಂತಸದ ವಿಚಾರ. ಮಕ್ಕಳೂ ಉತ್ಸಾಹದಿಂದ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ.